ಮಂಗಳೂರು: ಕಣ್ಣೂರು- ಕನ್ನಗುಡ್ಡ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಇಲ್ಲಿ 7.5 ಮೀಟರ್ ಅಗಲದ ರಸ್ತೆ ಮಾಡಲಾಗುವುದು. ಸುಮಾರು 5 ಕಿ.ಮೀ ಉದ್ದಕ್ಕೆ ಈ ರಸ್ತೆ ಬರುತ್ತದೆ ಎಂದರು....
ಮಂಗಳೂರು: ನೇತ್ರಾವತಿ ಸೇತುವೆಯಿಂದ ನದಿ ಬದಿಯಲ್ಲಿ ಮಂಗಳೂರು ಹಳೆ ಬಂದರು, ಸುಲ್ತಾನ್ ಬತ್ತೇರಿ, ತಣ್ಣೀರುಬಾವಿಯಾಗಿ ನವಮಂಗಳೂರು ಬಂದರಿಗೆ ಪರ್ಯಾಯ ಹೆದ್ದಾರಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಾ ಈ ಯೋಜನೆಗೆ ಸುಮಾರು...
ರಾಜ್ಯ ಯೋಜನೆ ಮತ್ತು ತಂತ್ರಜ್ನಾನ ಸಚಿವರಾದ ಎಂ.ಆರ್.ಸೀತಾರಾಂ ಅವರನ್ನು ಶಾಸಕ ಜೆ.ಆರ್.ಲೋಬೊ ಅವರು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್...
ಮಂಗಳೂರು:ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲ್ವೇ ನಿಲ್ದಾಣ ರಸ್ತೆ ಅಭಿವೃದ್ಧಿಗೆ 4.05 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಕಂಕನಾಡಿ ಜಂಕ್ಷನ್ ರಸ್ತೆ ವೀಕ್ಷಣೆ ಮಾಡಿ ಮಾತನಾಡಿ ಮಂಗಳೂರು ಮಹಾನಗರಪಾಲಿಕೆ ಪ್ರೀಮಿಯಮ್ ಎಫ್ ಎ ಆರ್ ನಿಂದ 2.05 ಕೋಟಿ ರೂಪಾಯಿ ಮತ್ತು ರಾಜ್ಯ...
ಮಂಗಳೂರು: ಕುದ್ರೋಳಿ-ಅಳಕೆ ರಸ್ತೆಯಲ್ಲಿ ನೂತನವಾಗಿ ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 11 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು. ಅವರು ಕುದ್ರೋಳಿ-ಅಳಕೆ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಬ್ರಿಡ್ಜ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿ ಸುಮಾರು 15 ಮೀಟರ್...