ಮಂಗಳೂರು: ಶಾಸಕ ಜೆ.ಆರ್. ಲೋಬೊ, ಹಾಗೂ ನಗರ ಪಾಲಿಕೆ, ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ, ಸಂಚಾರಿ ನಿಯಂತ್ರಣ ಆಧಿಕಾರಿಗಳ ಜೊತೆ ನಗರದ ಪಡೀಲ್ ಜಂಕ್ಷನ್ ನಲ್ಲಿ ಅಗುವ ಹಾಲವಾರು ಅಪಘಾತ ಹಾಗೂ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಪರೀಶಿಲನೆ ಮಾಡಿದರು.

ಕೆಲವು ತುರ್ತಾಗಿ ನಡೆಸುವ ಬದಲಾವಣೆಯ ಬಗ್ಗೆ ಚರ್ಚೆ ನಡೇಸಿ, ಒಂದು ವಾರದೊಳಗೆ ಕ್ರಮ ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇದರಲ್ಲಿ, ಎರಡು ಬಸ್ಸ್ ಸ್ಟಾಂಡ್‍ಗಳ ಸ್ಥಳಾಂತರ, ಆವೈಜ್ಞಾನಿಕವಾಗಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಐಲ್ಯಾಂಡ್‍ಗಳನ್ನು ತೇರವುಗೊಳಿಸಲು, ಸ್ಪೀಡ್ ಬ್ರೇಕರ್‍ಗಳನ್ನು ಅಳವಡಿಸುವುದು ಹಾಗೂ ಪೋಲಿಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲು ಅಧಿಕಾರಿಗಳಿಗೆ ಅದೇಶ ನೀಡಿದರು. ಹಾಗು ಮುಂದಿನ ದೀನಗಳಲ್ಲಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಲು ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹೇಳಿದರು.

ಬಳಿಕ, ಶಾಸಕರು ಪಡೀಲ್-ಬಜಾಲ್‍ನಲ್ಲಿರುವ ರೈಲ್ವೆ ಮೇಲ್ಸೆÉತುವೆ ಹಾಗೂ ಪಂಪ್‍ವೇಲ್ ಬಳಿ ನೀರ್ಮಾಣ ಹಂತದಲ್ಲಿರುವ ಕಿರು ಸೇತುವೆಯ ಕಾಮಗಾರಿಯನ್ನು ಪರೀಶಿಲಿಸಿ, ನವೆಂಬರ್ ತಿಂಗಳಿನ ಆಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ತೀಳಿಸಿದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ಪ್ರವೀಣ್ ಚಂದ್ರ ಆಳ್ವ, ಸಬೀತಾ ಮಿಸ್ಕಿತ್, ಪ್ರಕಾಶ್ ಅಳಪೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.