ಮಂಗಳೂರು: ರಾಜ್ಯ ಸರಕಾರದ ಎಸ್.ಎಫ್.ಸಿ ನಿಧಿಯಿಂದ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ ಸುಮಾರು 45.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ 24ನೇ ದೇರೆಬೈಲು ದಕ್ಷಿಣ ವಾರ್ಡ್‍ನ ಕಾಪಿಕಾಡ್ 4ನೇ ಅಡ್ಡ ರಸ್ತೆಯ ಕಾಂಕ್ರಿಟ್ ಚರಂಡಿ ಮತ್ತು ಕಾಂಕ್ರಿಟ್ ರಸ್ತೆಯ ಗುದ್ದಲಿ ಪೂಜೆಯನ್ನು ಶಾಸಕ ಜೆ.ಆರ್.ಲೋಬೊರವರು ಶನಿವಾರ ನೆರವೇರಿಸಿದರು.

ಮುಖ್ಯ ರಸ್ತೆಗಳ ಜೊತೆಗೆ ಒಳ ರಸ್ತೆಗಳ ಅಭಿವೃದ್ಧಿಗೆ ಸರಕಾರ ಮತ್ತು ಮಹಾನಗರ ಪಾಲಿಕೆ ಹೆಚ್ಚು ಅದ್ಯತೆ ನೀಡಿದೆ. ನಗರದ 45 ರಸ್ತೆಗಳ ಫುಟ್‍ಪಾತ್ ಕಾಮಗಾರಿಗಳಿಗೆ ಸುಮಾರು 12 ಕೋಟಿ ರೂಪಾಯಿ ಅನುದಾನವನ್ನು ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ಮೀಸಲಿಟ್ಟಿದೆ. ಇನ್ನೆರಡು ವರ್ಷದಲ್ಲಿ ನಗರದಲ್ಲಿರುವ ರಸ್ತೆ ಹಾಗೂ ಫುಟ್‍ಪಾತ್ ಸಮಸ್ಯೆಯನ್ನು ಬಗೆಹರಿಸಲಾಗುವುದು, ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ರಜನೀಶ್ ಕಾಪಿಕಾಡ್, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ದೀಪಕ್ ಪೂಜಾರಿ, ಸಚೇತಕ ಶಶಿಧರ್ ಹೆಗ್ದೆ, ಸದಸ್ಯರಾದ ಪ್ರತಿಭಾ ಕುಲಾಯಿ, ವಾರ್ಡ್ ಅಧ್ಯಕ್ಷ ಸದಾಶಿವ್ ಕಾಪಿಕಡ್, ಮುಖಂಡರಾದ ಟಿ.ಕೆ.ಸುಧೀರ್, ರಮಾನಂದ್ ಪೂಜಾರಿ, ಲುಕ್ಮಾನ್, ನಿತ್ಯಾನಂದ್ ಶೆಟ್ಟಿ, ಕೃತಿನ್ ಕುಮಾರ್ ಮತ್ತಿತ್ತರು ಉಪಸ್ಥಿತರಿದ್ದರು.