ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ನಗರ ಉತ್ತರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು, ಇತ್ತೀಚಿಗೆ ನಿಧಾನರಾದ ಹಿರಿಯ ಮುಖಂಡ, ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಮೊಹಮ್ಮದ್ ಬದ್ರುದ್ದೀನ್ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಆರ್ಪಿಸಲಾಯಿತು.

ಸಂತಾಪ ಸಭೆಯಲ್ಲಿ, ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿ’ಸೂಜ, ಸುರೇಶ್ ಬಲ್ಲಾಳ್, ಪಿ.ವಿ. ಮೋಹನ್, ಇಬ್ರಾಹಿಂ ಕೋಡಿಜಲ್, ಉಮೇಶ್ ಚಂದ್ರ, ವಿಶ್ವಾಸ್ ದಾಸ್ ಮೋದಲಾದವರು ಮೊಹಮ್ಮದ್ ಬದ್ರುದ್ದೀನ್‍ರವರು ಸಮಾಜಕ್ಕೆ ಹಾಗು ಪಕ್ಷಕ್ಕೆ ನೀಡಿದ ನಿಸ್ವಾರ್ಥ ಕೂಡುಗೆಯನ್ನು ನೆನಪಿಸಿದರು.

ಈ ಸಂಧರ್ಭದಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಕಾರ್ಪೋರೇಟರ್‍ಗಳಾದ ಕವಿತಾ ವಾಸು, ಶೈಲಾಜ, ಆಶಾ ಡಿ’ಸಿಲ್ವ, ನಾಗವೇಣಿ, ಅಕಾಡೆಮಿ ಅಧ್ಯಕ್ಷರಾದ ರೋಯ್ ಕಾಸ್ತೆಲಿನೊ, ಹನೀಫ್ ಹಾಜಿ , ಕಾಂಗ್ರೆಸ್ ಮುಖಂಡರಾದ ತೇಜೊಮಯ, ಬಾಲಕೃಷ್ಣ ಶೆಟ್ಟಿ, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ತೆಜಸ್ವಿ ರಾಜ್, ಡೆನಿಸ್ ಡಿಸಿಲ್ವ, ರಮಾನಂದ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.

condalence-meet-01condalence-meet-02