ಮಂಗಳೂರು: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ನವೆಂಬರ್ 13 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಕುಲಶೇಖರ ಸೇಕ್ರೆಡ್ ಹಾರ್ಟ್ಸ್ ಶಾಲೆಯ ಕೆ.ಜೆ ಬ್ಲಾಕ್ ನಲ್ಲಿ ಏರ್ಪಡಿಸಲಾಗಿದೆ.

ಮಂಗಳೂರು ದಕ್ಷಿಣ ವಿಧಾನ ಸಭಾ, ದಕ್ಷಿಣ ವಲಯ ಕಾಂಗ್ರೆಸ್ ಸಮಿತಿ, 51 ನೇ ಅಳಪೆ ಉತ್ತರ ವಾರ್ಡ್ ಕಾಂಗ್ರೆಸ್ ಸಮಿತಿ ಹಾಗೂ ಜೀವನ್ ಧಾರಾ ಸಮಾಜ ಸೇವಾ ಪ್ರತಿಷ್ಠಾನ ಕುಲಶೇಖರ, ಕೆ.ಎಂ.ಸಿ ಆಸ್ಪತ್ರೆ ಹಾಗೂ ಎ.ಜೆ.ಆಸ್ಪತ್ರೆಯ ಸಹಯೋಗದೊಂದಿಗೆ ಶಿಬಿರ ಜರಗಲಿದೆ.

ಈ ಶಿಬಿರದಲ್ಲಿ ಕಣ್ಣಿನ ತಪಾಸಣೆ, ದಂತ ವೈದ್ಯಕೀಯ ತಪಾಸಣೆ, ಮಲೇರಿಯಾ ತಪಾಸಣೆ, ಮಹಿಳೆಯರಿಗಾಗಿ ಥೈರಾಯಿಡ್ ತಪಾಸಣೆ, ಬಿ.ಪಿ ಮತ್ತು ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಗುವುದು.
ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತ್ರೀರೋಗ, ಚರ್ಮ, ಸಾಮಾನ್ಯ ಕಾಯಿಲೆಗಳಿಗೆ ಪರೀಕ್ಷೆಯನ್ನು ನಡೆಸಲಾಗುವುದು.

ಶಿಬಿರದಲ್ಲಿ ಅಗತ್ಯವುಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು. ಅಗತ್ಯವುಳ್ಳವರಿಗೆ ಔಷಧಿಯನ್ನು ನೀಡಲಾಗುವುದು. ಹಿಂದೆ ತಪಾಸಣೆ ನಡೆಸಿದ ಡಾಕ್ಟರ್ ಚೀಟಿ ಇದ್ದರೆ ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ಬಾಲಕೃಷ್ಣ ಶೆಟ್ಟಿ- 94481 90688, ಸಿಸ್ಟರ್ ಅನ್ನಮರಿಯ ಬಿ.ಎಸ್- 87490 97867, ಪ್ರಭಾಕರ್ ಶ್ರೀಯಾನ್- 94802 29811, ಬಿ.ಪ್ರಕಾಶ್ – 99644 99387, ಹೆನ್ರಿ ಡಿಸೋಜ- 99640 26638, ಡೆನಿಸ್ ಡಿಸಿಲ್ವ- 99456 20111, ಜೋರ್ಜ್ ಫೆರ್ನಾಂಡಿಸ್- 98452 76691, ಸದಾನಂದ – 94830 32525 ಇವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.