ತಾ 08.05.2018 ರಂದು ಬೆಳಿಗ್ಗೆ ವೆಲೆನ್ಸಿಯಾ, ಸೂಟರ್ ಪೇಟೆ ಪರಿಸರಗಳಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಜೆ. ಆರ್. ಲೋಬೊ ರವರು ಬಿರುಸಿನ ಮತಯಾಚನೆ ನಡೆಸಿದರು. ಪಕ್ಷದ ಅನೇಕ ಕಾರ್ಯಕರ್ತರು ಲೋಬೊ ರವರ ಜತೆಗಿದ್ದರು. ಬಹಳಷ್ಟು ಉತ್ಸಾಹದಿಂದ ಲೋಬೊ ಹಾಗೂ ಅವರ ತಂಡದವರು ಮತಯಾಚನೆ ಮಾಡಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಬಹುತೇಕ ಪರಿಶಿಷ್ಟ ಜಾತಿ, ಪಂಗಡಗಳ ಜನರು ವಾಸಿಸುತ್ತಿರುವ ಈ ಪ್ರದೇಶ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಲೋಬೊ ರವರು ಮತಯಾಚನೆ ಮಾಡುವಾಗ ಪ್ರತೀ ಮನೆಗಳಲ್ಲಿ ಜನರು ನಮಗೆ ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿದ್ದರು. ಈ ಪ್ರದೇಶದ ಜನರ ಆತ್ಮೀಯತೆ, ಪ್ರೀತಿ ವಾತ್ಸಲ್ಯ ನಮಗೆ ಅತೀವ ಸಂತಸವನ್ನು ನೀಡಿದೆ. ಕರ್ನಾಟಕ ಸರಕಾರದ ಪರಿಶಿಷ್ಟ ಜಾತಿ/ಪಂಗಡದವರಿಗೆ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಪರಿಶಿಷ್ಟ ಪಂಗಡದವರ ಉದ್ಧಾರಕ ದಿ. ಕುದ್ಮುಲ್ ರಂಗರಾವ್ ರವರ ಹೆಸರಿನಲ್ಲಿ ಬಾಬುಗುಡ್ಡೆಯಲ್ಲಿ ರೂ. 3.50 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಇದು ಪೂರ್ತಿಯಾದರೆ ಈ ಕಟ್ಟಡದಲ್ಲಿ ಪರಿಶಿಷ್ಟ ಪಂಗಡಗಳ ಜನರ ಅನೇಕ ಕಲ್ಯಾಣ ಕಾರ್ಯಕ್ರಮಗಳು ಜರಗಲಿವೆ. ಮಹಾಕಾಳಿಪಡ್ಪುವಿನಲ್ಲಿ ರೂ. 2.40 ಕೋಟಿ ವೆಚ್ಚದಲ್ಲಿ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ವಸತಿ ಗೃಹದ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಅದಲ್ಲದೆ ಈ ಪ್ರದೇಶದಲ್ಲಿರುವ ಶ್ರೀ ಆದಿ ಶಕ್ತಿ ಭುವನೇಶ್ವರಿ ಸಿದ್ಧಪೀಠಕ್ಕೆ ತೆರಳಿ ದೇವರ ದರ್ಶನ ಪಡೆದು, ಅಲ್ಲಿ ಶ್ರೀ ಪ್ರವೀಣ್ ಬಾಬಾರವರ ಆರ್ಶೀರ್ವಾದವನ್ನು ಪಡೆದಿದ್ದೇನೆ. ಖಂಡಿತವಾಗಿಯೂ, ಈ ಪ್ರದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ನನ್ನನ್ನು ಮಗದೊಮ್ಮೆ ಶಾಸಕನಾಗಿ ಆಯ್ಕೆ ಮಾಡುತ್ತಾರೆ ಎಂಬ ದೃಢನಂಬಿಕೆ ಇದೆ. ಈ ಸಂದರ್ಭದಲ್ಲಿ ಮನಪಾ ಸದಸ್ಯರುಗಳಾದ ಅಪ್ಪಿ, ಜೆಸಿಂತಾ ಆಲ್ಪ್ರೇಡ್, ಆಶಾ ಡಿ.ಸಿಲ್ವ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಸದಾಶಿವ ಅಮೀನ್, ಸುರೇಶ್ ಶೆಟ್ಟಿ, ಪ್ರದೀಪ್ ಬೇಕಲ್, ಟಿ.ಕೆ. ಸುಧೀರ್, ಮೆರಿಲ್ ರೇಗೋ, ರಮಾನಂದ ಪೂಜಾರಿ, ಬಿ.ಎಂ. ಭಾರತಿ, ಡೆನ್ನಿಸ್ ಡಿ.ಸಿಲ್ವ, ಹೊನ್ನಯ್ಯ, ಹ್ಯೂಬರ್ಟ್ ಪಾಯಸ್, ವಿನಯ್ ಲೋಬೊ, ಚೇತನ್, ಎಸ್.ವಿ. ಅಮೀನ್, ವಿನಯ್ ಮಸ್ಕರೇನಸ್ ಮುಂತಾದವರು ಉಪಸ್ಥಿತರಿದ್ದರು.

ಸೂಟರ್ ಪೇಟೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊ ಮತಯಾಚನೆ