2018ರ ವಿಧಾನಸಭೆ ಚುಣಾವಣೆಯ ಪ್ರಯುಕ್ತ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಛೇರಿಯ ಉದ್ಘಾಟನೆಯು ಇಂದು ತಾ.02.04.2018ರಂದು ನಗರದ ಕದ್ರಿ ಮುಖ್ಯ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮಾಡಲಾಯಿತು. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹರೀಶ್ ಕುಮಾರ್ ರವರು ಉದ್ಘಾಟನೆಯನ್ನು ನೆರವೇರಿಸಿ, ಈ ಬಾರಿಯ ವಿಧಾನಸಭಾ ಚುನಾವಣೆಯು ಅಭಿವೃದ್ಧಿ ಮತ್ತು ಅಪಪ್ರಚಾರ ವಿಷಯದಲ್ಲಿ ನಡೆಯಲಿದೆ. ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯ ನೆಲೆಯಲ್ಲಿ ಮತವನ್ನು ಯಾಚಿಸಲಿದೆ. ಕಳೆದ 5 ವರ್ಷಗಳಲ್ಲಿ ಸಾವಿರಾರು ಕೋಟಿ ಅನುದಾನ ನಮ್ಮ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಬಂದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅನೇಕ ಭಾಗ್ಯಗಳನ್ನು ಬಡಜನತೆಗೆ ಒದಗಿಸಿಕೊಟ್ಟಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಶ್ರೀ.ಜೆ.ಆರ್.ಲೋಬೊರವರು ಕಳೆದ 20 ವರ್ಷಗಳಲ್ಲಿ ಬಿಜೆಪಿ ಶಾಸಕರಿದ್ದ ಸಮಯದಲ್ಲಿ ಮಾಡಲಾಗದ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ. ಆದರೆ ಬಿಜೆಪಿಯವರು ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಕಂಡು ಬೆರಗಾಗಿ ಅಪಪ್ರಚಾರವನ್ನು ಸೃಷ್ಠಿಸುತ್ತಿದ್ದಾರೆ. ಆದರೆ ಇದು ಮತದಾರರ ಮುಂದೆ ನಡೆಯುವುದಿಲ್ಲ ಎಂದರು.

ಶಾಸಕ ಶ್ರೀ.ಜೆ.ಆರ್.ಲೋಬೊರವರು ಮಾತನಾಡುತ್ತಾ ಕಳೆದ ನಾಲ್ಕುವರೆ ವರ್ಷಗಳಲ್ಲಿ ಸಾಕಷ್ಟು ಕೆಲಸಗಳು ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಗಿದೆ. ಮಂಗಳೂರು ನಗರದಲ್ಲಿ ಶಾಂತಿ ಇದೆ. ಜನರು ನೆಮ್ಮದಿಯಿಂದ ಇದ್ದಾರೆ. ಎಲ್ಲಾ ಧರ್ಮಗಳನ್ನು ಒಟ್ಟು ಸೇರಿಸಿ ಸಾಮರಸ್ಯದ ಬದುಕನ್ನು ಕಾಪಪಾಡಿಕೊಳ್ಳುವುದೇ ಮುಖ್ಯವಾಗಿದೆ. ಶಾಂತಿಯ ಮೂಲಕ ಬಂಡವಾಳಗಳನ್ನು ಆಕರ್ಷಿಸಿ, ಯುವಕ ಯುವತಿಯರಿಗೆ ಉದ್ಯೋಗ ಸೌಲಭ್ಯ ನೀಡಬಹುದು. ಇದರಿಂದ ಯುವಕರು ಹಾಗೂ ಯುವತಿಯರು ಪರವೂರಿಗೆ ಉದ್ಯೋಗಗಳನ್ನು ಹರಸಿ ಹೋಗುವುದನ್ನು ತಡೆಹಿಡಿಯಬಹುದು. ಮಂಗಳೂರು ನಗರದ ಪ್ರಮುಖ ಉಧ್ಯಮ ಮೀನುಗಾರಿಕೆಗೆ ವಿಶೇಷವಾದ ಒತ್ತು ನೀಡಲಾಗಿದೆ. ಅದರೊಂದಿಗೆ ಬಂದರು ಅಭಿವೃದ್ಧಿಗೆ ಗಮನಹರಿಸಲಾಗಿದೆ. ಲಕ್ಷದ್ವೀಪದ ಜೊತೆಗೆ ವಾಣಿಜ್ಯ ಸಂಬಂಧವನ್ನು ಇನ್ನಷ್ಟು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಂತಹ ಕಾರ್ಯಕ್ಕೆ ಮುಂದಾಗಬೇಕು. ಪ್ರತಿ ಬೂತ್ ನಲ್ಲಿ 25 ಜನ ಸದಸ್ಯರನ್ನು ನೇಮಿಸಿ, ಚುನಾವಣೆ ಎದುರಿಸಲು ಸಧೃಡರಾಗಬೇಕೆಂದು ಕರೆಯಿತ್ತರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಮುಖ್ಯ ಸಚೇತಕ ಶ್ರೀ ಐವನ್ ಡಿಸೋಜ, ಮಾಜಿ ರಾಜ್ಯಸಭಾ ಸದಸ್ಯ ಬಿ ಇಬ್ರಾಹಿಂ, ಮಾಜಿ ಮುಖ್ಯ ಸಚೇತಕ ಕೆ.ಎಸ್ ಮೊಹಮ್ಮದ್ ಮಸೂದ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಕೆಪಿಸಿಸಿ ಕಾರ್ಯದರ್ಶಿಗಳಾದ ಕಳ್ಳಿಗೆ ತಾರನಾಥ ಶೆಟ್ಟಿ, ನವೀನ್ ಡಿಸೋಜ, ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಭಾಸ್ಕರ್.ಕೆ, ಮೂಡ ಅಧ್ಯಕ್ಷರಾದ ಸುರೇಶ್ ಬಲ್ಲಾಳ್, ಪಕ್ಷದ ಪ್ರಮುಖರಾದ ಶಶಿಧರ್ ಹೆಗ್ಡೆ, ಬಲರಾಜ್ ರೈ, ಪ್ರಭಾಕರ ಶ್ರೀಯಾನ್, ಪ್ರಸಾದ್ ರಾಜ್ ಕಾಂಚನ್, ವಿನಯ ರಾಜ್, ಮಿಥುನ್ ರೈ, ಶಾಲೆಟ್ ಪಿಂಟೋ, ಅಶ್ರಫ್, ದೀಪಕ್ ಕುಮಾರ್, ಬಿನೂ ಅಬ್ದುಲ್ಲಾ, ಶೇಖರ್ ಸುವರ್ಣ, ಮೆರಿಲ್ ರೇಗೋ, ಅಪ್ಪಿ, ಹನೀಫ್ ಹಾಜಿ, ನಮಿತಾ ರಾವ್, ಮೊದಲಾದವರು ಉಪಸ್ಥಿತರಿದ್ದರು. ದಕ್ಷಿಣ ಬ್ಲಾಕ್ ಅಧ್ಯಕ್ಷ ಶ್ರೀ.ಅಬ್ದುಲ್ ಸಲೀಮ್ ಸ್ವಾಗತಿಸಿ, ನಗರ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ವಂದಿಸಿದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.