ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಶೇಷವಾದ ಗಮನ ಹರಿಸಿದೆ. ಹಲವಾರು ಕೆರೆಗಳ ಹೂಳೆತ್ತುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಮಂಗಳೂರಿನಲ್ಲಿ ಈಗಾಗಲೇ ಶಾಸಕ ಶ್ರೀ.ಜೆ.ಆರ್.ಲೋಬೊರವರು ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ ಕಾಮಗಾರಿಗಳ ಚಾಲನೆ ಈಗಾಗಲೇ ಚಾಲ್ತಿಯಲ್ಲಿದೆ. ಅದರಲ್ಲಿ ಪಡೀಲ್ ನಲ್ಲಿರುವ ಬೈರಾಡಿ ಕೆರೆ ಈಗಾಗಲೇ ಅವರ ಕಾರ್ಯ ಆರಂಭವಾಗಿದ್ದು, ಶಾಸಕ ಲೋಬೊರವರು ಇಂದು ತಾ. 17.02.2018ರಂದು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಕೆಲಸ ವೀಕ್ಷಿಸಿದರು. ತದನಂತರ ಮಾತನಾಡಿದ ಅವರು, ಬೈರಾಡಿ ಕೆರೆ ನಗರದ ಪುರಾತನ ಕೆರೆಗಳಲ್ಲಿ ಒಂದು. ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ರೂ.80ಲಕ್ಷ ಹಾಗೂ ಮೂಡ ವತಿಯಿಂದ ರೂ.2.20 ಕೊಟಿ ಮಂಜೂರಾತಿಯಾಗಿದೆ.

ನೀರಾವರಿ ಇಲಾಖೆಯಿಂದ ಕೆರೆಯನ್ನು ಸಂರಕ್ಷಣೆಗೊಳಿಸುವ ನಿಟ್ಟಿನಲ್ಲಿ ತಡೆಗೋಡೆಯ ಕೆಲಸ ಕಾರ್ಯ ಪ್ರಾರಂಭವಾಗಿದೆ. ಮೂಡ ವತಿಯಿಂದ ಕೆರೆಯ ಅಭಿವೃದ್ಧಿ ಕಾರ್ಯವು ನಡೆಯಲಿದ್ದು, ಅದರಲ್ಲಿ ಕೆರೆಯ ಬದಿಯಲ್ಲಿ ಉದ್ಯಾನವನ, ಸಾರ್ವಜನಿಕರಿಗೆ ನಡೆದಾಡಲು ವಾಕಿಂಗ್ ಟ್ರ್ಯಾಕ್ ಹಾಗೂ ಲೈಟ್ ಗಳನ್ನು ಅಳವಡಿಸಲಾಗುವುದು. ಜನರಿಗೆ ಆರೋಗ್ಯ ದೃಷ್ಠಿಯಿಂದಲೂ ಕೂಡ ಈ ಕೆರೆಯು ಸಹಾಯಕವಾಗಬಲ್ಲುದು. ಒಟ್ಟಾರೆಯಾಗಿ ಕೆರೆಗಳ ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಫೊರೇಟರ್ ಪ್ರಕಾಶ್ ಬಿ ಸಾಲಿಯಾನ್, ಭೂ ನ್ಯಾಯ ಮಂಡಳಿ ಡೆನ್ನಿಸ್ ಡಿಸಿಲ್ವ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಕೃತಿನ್ ಕುಮಾರ್, ಸಣ್ಣ ನೀರಾವರಿ ಇಂಜಿನಿಯರ್ ಶೇಷ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.