ಕಸಬಾ ಬೆಂಗ್ರೆ, ತೋಟಾ ಬೆಂಗ್ರೆ, ಬೊಕ್ಕ ಪಟ್ಣ ಬೆಂಗ್ರೆ ಮೊದಲಾದ ಪ್ರದೇಶದಲ್ಲಿ ಅನೇಕ ಬಡಜನರು ಕಳೆದ ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಕಳೆದ ಹಲವಾರು ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳಲ್ಲಿ ಶಾಸಕರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗೀನ ಶಾಸಕರು ನಾಲ್ಕುವರೆ ವರ್ಷದ ಹಿಂದೆ ಮತಯಾಚನೆಗೆ ಬಂದಾಗ ಈ ಬಡಜನರು ಶಾಸಕರಲ್ಲಿ ಮಾಡಿಕೊಂಡ ಒಂದೇ ವಿನಂತಿ. ನಮಗೆ ನಮ್ಮ ಮನೆಗೆ ಹಕ್ಕು ಪತ್ರ ಕೊಡಿ, ನಾವಿರುವ ಜಾಗಕ್ಕೆ ಆರ್.ಟಿ.ಸಿ ಕೊಡಿ ಎಂಬುದು ಕೇಳಿ ಬಂತು. ಶಾಸಕರು ಆ ಸಮಯದಲ್ಲಿ ನಾನು ಪ್ರಯತ್ನಮಾಡುತ್ತೇನೆ. ತಮಗೆ ಬೇಕಾದ ಹಕ್ಕು ಪತ್ರ ಆರ್.ಟಿ.ಸಿ ಯನ್ನು ದೊರಕಿಸುವ ಭಾರವಸೆಯನ್ನು ಶಾಸಕರು ಹೇಳಿದ್ದರು. ಕಳೆದ ನಾಲ್ಕು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಈ ಭಾಗದಲ್ಲಿರುವ ಸರ್ವೆ ನಂಬರ್ ಸಮಸ್ಯೆಯನ್ನು ಬಗೆಹರಿಸಿ ಈ ಭಾಗದಲ್ಲಿರುವ ಎಲ್ಲಾ ಮನೆಗಳ ಸರ್ವೆ ಮಾಡಿ ಯಾರು ವಾಸವಾಗಿದ್ದರೆ ಅವರಿಗೆ ಹಕ್ಕು ಪತ್ರವನ್ನು ನೀಡುವ ಕಾರ್ಯಕ್ರಮವನ್ನು ಇವತ್ತು ಹಮ್ಮಿ ಕೊಂಡಿದ್ದಾರೆ. ಹಲವಾರು ಅರ್ಜಿಗಳು ಈಗಾಗಲೇ ಬಂದಿರುತ್ತದೆ. ಇವತ್ತು ಮೊದಲನೇ ಹಂತದ ಸುಮಾರು 1,138 ಫಲಾನುಭವಿಗಳಿಗೆ ಇಂದು ಹಕ್ಕು ಪತ್ರವನ್ನು ನೀಡಿದ್ದು, ಇನ್ನು ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಹಂತದಲ್ಲಿ ಹಕ್ಕು ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.