ನಗರದ ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆ ಕಾಂಕ್ರೀಟೀಕರಣಗೊಳಿಸಲು ತಾ.18.03.2018 ರಂದು ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವಾದ ಬಜಾಲ್ ಜಲ್ಲಿಗುಡ್ಡೆಯ ಏನೆಲ್ ಮಾರ್ ರಸ್ತೆಯು ತೀರಾ ಹದೆಗೆಟ್ಟಿರುವುದರಿಂದ ಇಲ್ಲಿನ ಜನರು ಸಂಕಷ್ಟದಿಂದ ಬಳಲುತ್ತಿದ್ದರು. ಜನರಿಗೆ ನಡೆದಾಡಲು ಬಹಳ ಕಷ್ಟವಾಗುತ್ತಿತ್ತು. ಇಲ್ಲಿನ ಜನರು ಹಿಂದೆ ನನಗೆ ಮನವಿಯನ್ನು ಕೂಡ ಸಲ್ಲಿಸಿದ್ದರು. ಇಲ್ಲಿನ ಜನರ ಪರಿಸ್ಥಿತಿಯನ್ನು ರಾಜ್ಯದ ಲೋಕೊಪಯೋಗಿ ಇಲಾಖೆಯ ಸಚಿವರಾದ ಡಾ.ಮಹದೇವಪ್ಪರವರೊಡನೆ ನಿವೇದನೆ ಮಾಡಿ, ಸುಮಾರು ರೂ. ಒಂದು ಕೋಟಿ ಅನುದಾನ ಮಂಜುರಾತಿ ಮಾಡಿಸಿದ್ದೇನೆ. ಸುಮಾರು 850 ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿಸಬಹುದು. ಸುಮಾರು ರೂ.8 ಕೋಟಿ ಅನುದಾನವನ್ನು ನಗರದ ವಿವಧ ಕಡೆಗಳ ರಸ್ತೆ ಅಭಿವೃದ್ಧಿಗಳಿಗೆ ರಾಜ್ಯದ ಲೋಕೊಪಯೋಗಿ ಇಲಾಖೆ ಈಗಾಗಲೇ ಬಿಡುಗಡೆಗೊಳಿಸಿದೆ. ಮುಂದಿನ ಮಳೆಗಾಲದ ಒಳಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಲೋಕರ್ಪಣೆ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಸುಮಯ್ಯ ಅಶ್ರಫ್, ಕರ್ನಾಟಕ ಪ್ರವಾಸೋಧ್ಯಮ ನಿಗಮದ ನಿರ್ದೇಶಕ ಅಬ್ದುಲ್ ಹಮೀದ್ ಕಣ್ಣೂರು. ಎಪಿಎಂಸಿ ಸದಸ್ಯ ಭರತೇಶ್ ಅಮೀನ್, ಕಾಂಗ್ರೆಸ್ ಮುಖಂಡರುಗಳಾದ ಅಶ್ರಫ್ ಬಜಾಲ್, ಆನಂದ ರಾವ್, ಹನೀಫ್, ಅಹಮ್ಮದ್ ಬಾವಾ, ಅಬೂಬಕ್ಕರ್ ಬಜಾಲ್, ಹರಿಪ್ರಸಾದ್ ಹಾಗೂ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ರವಿಕುಮಾರ್, ದಾಸ್ ಪ್ರಕಾಸ್ ಉಪಸ್ಥಿತರಿದ್ದರು.