ನಗರದ ಕುಲಶೇಖರದಲ್ಲಿರುವ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಸಂಸ್ಥೆಯ ಬಳಿಯಿರುವ ಡೈರಿ ರಸ್ತೆ ಕಾಂಕ್ರಿಟೀಕರಣದ ಕಾಮಗಾರಿಯು ದಿನಾಂಕ 26.03.2018ರಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್ ಲೋಬೊರವರು ನೆರವೇರಿಸಿದರು. ಕರ್ನಾಟಕ ಸರಕಾರದ ಲೋಕೊಪಯೋಗಿ ಇಲಾಖೆಯಿಂದ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡಲಾಗುತ್ತದೆ. ಸುಮಾರು 450 ಮೀಟರ್ ಉದ್ದಕ್ಕೆ ಹಾಗೂ 7 ಮೀಟರ್ ಅಗಲಕ್ಕೆ ಈ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಲಾಗುವುದು. ಶಾಸಕ ಶ್ರೀ ಜೆ.ಆರ್. ಲೋಬೊರವರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ ನಾಲ್ಕುವರೆ ವರ್ಷಗಳಲ್ಲಿ ಲೋಕೊಪಯೋಗಿ ಇಲಾಖೆಯಿಂದ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸುಮಾರು ರೂ.40 ಕೋಟಿ ಅನುದಾನ ಬಂದಿರುತ್ತದೆ.

ಸಾಮಾನ್ಯವಾಗಿ ಮಹಾನಗರಪಾಲಿಕೆಯ ವ್ಯಾಪ್ತಿಗೆ ಲೋಕೊಪಯೋಗಿ ಇಲಾಖೆಯಿಂದ ಅನುದಾನ ದೊರಕುವುದು. ನಾನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಶ್ರೀ.ಸಿದ್ದಾರಾಮಯ್ಯ ಹಾಗೂ ಲೋಕೊಪಯೋಗಿ ಇಲಾಖೆಯ ಸಚಿವರಾದ ಶ್ರೀ.ಡಾ|| ಮಹದೇವಪ್ಪರವರಲ್ಲಿಗೆ ಮಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಮನವಿಯನ್ನು ಸಲ್ಲಿಸಿದಾಗ, ಅದಕ್ಕೆ ಸ್ಪಂದಿಸಿ ಅವರು ಅನುದಾನವನ್ನು ಬಿಡುಗಡೆಗೊಳಿಸಿದರು. ಮಂಗಳೂರಿನ ಜನತೆ ಅಭಿವೃದ್ಧಿಯನ್ನು ಬಯಸುತ್ತಾರೆ. ಜನತೆಗೆ ಕೊಟ್ಟ ಆಶ್ವಾಸನೆಯನ್ನು ಈಡೇರಿಸಲು ನಾವು ಸದಾ ಸಿದ್ಧ ಎಂದರು.

ಮೇಯರ್ ಶ್ರೀ. ಭಾಸ್ಕರ ಕೆ ಮಾತನಾಡಿ, ಮಂಗಳೂರಿನ ಮುಖ್ಯ ರಸ್ತೆಯನ್ನು ಮಾತ್ರವಲ್ಲದೇ ಒಳರಸ್ತೆಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ನಗರದ ಬೆಳವಣಿಗೆಯಲ್ಲಿ ರಸ್ತೆಗಳ ಪಾತ್ರ ಮಹತ್ವವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪಮೇಯರ್ ಮೊಹಮ್ಮದ್ ಕೆ, ಪಾಲಿಕೆಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೋರೇಟರ್ ಗಳಾದ ಅಶೋಕ್ ಡಿ.ಕೆ, ಅಪ್ಪಿ, ರತಿಕಲಾ, ಕವಿತಾವಾಸು, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ ಸುಧೀರ್, ಡೈರಿ ಸಂಸ್ಥೆಯ ವ್ಯವಸ್ಥಾಪಕರುಗಳಾದ ರಾಯ್ ಕರ್, ಜಯದೇವಪ್ಪ, ಸಂಪತ್ ಕುಮಾರ್ ಹಾಗೂ ಎಂ.ರವಿ, ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ರವಿಕುಮಾರ್ ಉಪಸ್ಥಿತರಿದ್ದರು.