Home » Website » News from jrlobo's Office » ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ
ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ
Image from post regarding ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ

ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ

ತಾ 02.05.2018 ರಂದು ಸಂಜೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಜೆ. ಆರ್. ಲೋಬೊ ರವರು ಮಂಗಳೂರು ಮಹಾನಗರ ಪಾಲಿಕೆಯ ದೇರೇಬೈಲು ಪಶ್ಚಿಮ ವಾರ್ಡಿನ ವ್ಯಾಪ್ತಿಯಲ್ಲಿರುವ ಅಶೋಕ ನಗರ, ಕೊಟ್ಟಾರ ಹಾಗೂ ಸುಂಕದಕಟ್ಟೆ ಪರಿಸರದ ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು. ಪ್ರಾರಂಭದಲ್ಲಿ ಅಶೋಕನಗರದ ಶ್ರೀ ಚಂಡ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ದೇವರ ದರ್ಶನ ಪಡೆದರು. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ರೀ ವಿಶ್ವಾಸ್ ಕುಮಾರ್ ದಾಸ್, ಮನಪಾ ಸದಸ್ಯರುಗಳಾದ ಶ್ರೀಮತಿ ನಾಗವೇಣಿ, ಶ್ರೀ ರಾಧಾಕೃಷ್ಣ ರವರು ಅಭ್ಯರ್ಥಿಗೆ ಸಾಥ್ ನೀಡಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಅಭ್ಯರ್ಥಿ ಲೋಬೊ ರವರು, ಕಳೆದ 5 ವರ್ಷಗಳ ಅವಧಿಯಲ್ಲಿ ಮಂಗಳೂರು ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಬಹಳಷ್ಟು ಅನುದಾನವನ್ನು ವಿನಿಯೋಗಿಸಿದ್ದೇವೆ. ಮಾರುಕಟ್ಟೆಗಳ ಪುನರ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಒಳರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗಿದೆ. ಯಾಕೆಂದರೆ ಒಳಭಾಗಗಳ ರಸ್ತೆಗಳು ಅಭಿವೃದ್ಧಿಗೊಂಡರೆ ಮುಖ್ಯ ರಸ್ತೆಗಳಿಗೆ ವಾಹನಗಳ ಒತ್ತಡ ಕಡಿಮೆಯಾಗುವುದು. ಜನರಿಗೆ ನಡೆದಾಡಲು ಫೂಟ್ ಫಾತ್ ವ್ಯವಸ್ಥೆ ಮಾಡಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಇಚ್ಛಾಶಕ್ತಿ ನಮಗಿದೆ. ಜನರು ಅಭಿವೃದ್ಧಿಗೆ ಬಹಳಷ್ಟು ಪ್ರೋತ್ಸಾಹ ಕೊಡುತ್ತಿದ್ದಾರೆ. ಅಭಿವೃದ್ಧಿ ಪರ ಜನರು ಮತ ಹಾಕುತ್ತಾರೆ ಎಂದರು.

ಈ ಸಂಧರ್ಭದಲ್ಲಿ ಮಾಜಿ ಮನಪಾ ಸದಸ್ಯರಾದ ಪದ್ಮನಾಭ ಅಮೀನ್, ಸತೀಶ್ ಪೂಜಾರಿ, ಸಂತೋಷ್ ಶೆಟ್ಟಿ, ನೀರಜ್ ಪಾಲ್, ಚೇತನ್ ಕುಮಾರ್, ಜಯರಾಮ್, ಕಿಶನ್ ಕುಂದರ್, ನಾಗೇಶ್ ಕರ್ಕೆರ, ವಿಜಯಕುಮಾರ್ ಬಿ.ಕೆ., ಸೀತಾರಾಮ್ ಕರ್ಕೆರ, ಅಶ್ವಿನ್, ಜೀವನ್, ಸೀತಾರಾಮ್ ಶೆಟ್ಟಿ, ಪ್ರಸನ್ನ, ಧೀರಜ್, ವೆಲ್ವಿನ್, ರುಡಾಲ್ಪ್ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಲೋಬೋ ರವರಿಗೆ ದೇರೇಬೈಲು ಪಶ್ಚಿಮ ವಾರ್ಡಿನಲ್ಲಿ ಬಿರುಸಿನ ಮತಯಾಚನೆ