ಮಂಗಳೂರು: ಕಂಕನಾಡಿಯಿಂದ ನಂದಿಗುಡ್ಡೆ ತನಕ ಚತುಶ್ಪಥ ರಸ್ತೆಯನ್ನು ತ್ವರಿತ ಗತಿಯಲ್ಲಿ ಮುಂದುವರಿಸಲು ಶಾಸಕ ಜೆ.ಆರ್.ಲೋಬೊ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.

24 ಮೀಟರ್ ಅಗಲದ ರಸ್ತೆಯನ್ನು ನಿರ್ಮಿಸುವಂತೆಯೂ, ಅದಕ್ಕೆ ಅಗತ್ಯವಾದ ಹಣಕಾಸು ಸೌಲಭ್ಯವನ್ನು ಒದಗಿಸಿಕೊಳ್ಳುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚಿಸಿದರು.

ಈ ಕೆಲಸಕ್ಕೆ 2.5 ಕೋಟಿ ಹಣವಿದ್ದು ಉಳಿಕೆ ಹಣವನ್ನೂ ಒದಗಿಸುವುದಾಗಿ ಸಭೆಗೆ ಮಂಗಳೂರು ನಗರ ಪಾಲಿಕೆ ಆಯುಕ್ತರಾದ ಮಹಮ್ಮದ್ ನಜೀರ್ ಮಾಹಿತಿ ನೀಡಿದರು.

ಈ ಕಾಮಗಾರಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಭೂಮಿಯನ್ನ್ನು ಬಿಟ್ಟುಕೊಡುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಮನವೊಲಿಸಿ ಮತ್ತು ಅಭಿವೃದ್ಧಿ ಆದರೆ ಅದರ ಪ್ರಯೋಜನವನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆಯೂ ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದರು.

ರಸ್ತೆಯ ಜೊತೆಗೆ ಫುಟ್ ಪಾತ್, ನೀರು ಹರಿದು ಹೋಗಲು ಅವಕಾಶ ಹಾಗೂ ಮೂಲಭೂತ ವ್ಯವಸ್ಥೆಯನ್ನು ಜನರಿಗೆ ಮಾಡಿಕೊಡುವಂತೆ ಶಾಸಕರು ಸೂಚಿಸಿದರು.

ಸಭೆಯಲ್ಲಿ ಅಂಗಳೂರು ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರವೂಫ್, ಕಮಿಷನರ್ ಮಹಮ್ಮದ್ ನಜೀರ್, ಇ.ಇ. ಲಿಂಗೇಗೌಡ ಮುಂತಾದವರು ಉಪಸ್ಥಿತರಿದ್ದರು.