ಮಂಗಳೂರು: ಮಂಗಳೂರು ನಗರ ಅತೀ ವೇಗದಲ್ಲಿ ಬೆಳವಣಿಯುತ್ತಿರುವ ನಗರ. ಇಲ್ಲಿಯ ಜನಸಂಖ್ಯೆ ಅಷ್ಟಾಗಿರದಿದ್ದರೂ ಗಗನಚುಂಬಿ ಕಟ್ಟಡಗಳು, ವೈಶಾರಾಮಿ ಮಹಲುಗಳು ಪ್ರವಾಸೋದ್ಯಮದ ಮೆರುಗು ನೀಡುತ್ತಿವೆ. ಈ ನಗರದ ಆಧುನೀಕರಣ ಕಂಡು ಮತ್ತಷ್ಟು ರೀತಿಯಲ್ಲಿ ಹೊಸತನವನ್ನು ನೀಡುವ ಕಾಯಕಲ್ಪಕ್ಕೆ ಮುಂದಾಗಿರುವುದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ.

ಇತಿಹಾಸ ಪ್ರಸಿದ್ಧ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಅವರು ಹಾಕಿಕೊಂಡಿರುವ ಯೋಜನೆಗಳು. ಇದು ಅಗತ್ಯವಿದೆಯೇ ಎನ್ನುವ ಪ್ರಶ್ನೆ ಸಹಜ, ಆದರೆ ಅವುಗಳು ಔಚಿತ್ಯವನ್ನು ಗುರುತಿಸಿವುದರಲ್ಲಿ ಜೆ.ಆರ್.ಲೋಬೊ ಮಾತ್ರ ಮುಂಚೂಣಿಯಲ್ಲಿದ್ದಾರೆ.

ಕೆರೆಗಳು ಒಂದು ಕಾಲದಲ್ಲಿ ದನ ಕರುಗಳಿಗೆ ನೀರಿನ ಕೊರತೆ ನೀಗಿಸುವುದು, ದೈನಂದಿನ ಬಟ್ಟೆ ತೊಳೆಯುವುದು, ನಿತ್ಯ ಪರಿಹಾರಕ್ಕೆ ಈ ನೀರನ್ನೇ ಬಳಸುತ್ತಿದ್ದರು. ಇದರೊಂದಿಗೆ ಈ ಕೆರೆಗಳೇ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರವಾಗಿದ್ದವು. ಕೆಲವು ಕೆರೆಗಳು ದೇವರಿಗೆ ಪವಿತ್ರ ಜಲ ಒದಗಿಸುತ್ತಿದ್ದವು. ಆದರೆ ಕಾಲ ಕಳೆದಂತೆ, ಆಧುನೀಕತೆ ಹೆಚ್ಚಿದಂತೆ ಈ ಕೆರೆಗಳು ತಮ್ಮ ರೂಪಕಳೆದುಕೊಂಡು ಕೊಳಚೆ ನೀರಾಗಿ, ನಿರುಪಯುಕ್ತ ಕೇಂದ್ರಗಳಾಗಿ, ತ್ಯಾಜ್ಯ ವಸ್ತುಗಳನ್ನು ತುಂಬಿಸುವ ಘಟಕಗಳಾಗಿ ಪರಿವರ್ತನೆಯಾದವು. ಇಂಥ ನಿರುಪಯುಕ್ತ ಕೆರೆಗಳನ್ನು ಮತ್ತೆ ಹೊಸರೂಪಕ್ಕೆ ತರುವುದೇ ಶಾಸಕ ಜೆ.ಆರ್.ಲೋಬೊ ಅವರ ಗುರಿಯಾಗಿದೆ.

ಯಾವುದು ಬೇಡವಾಗಿದ್ದವೋ ಅವುಗಳನ್ನು ಮತ್ತೆ ಬೇಕಾಗಿಸುವ ಅಸೆ ಮತ್ತು ಇವುಗಳನ್ನು ಸಾಕಾರಗೊಳಿಸುವ ಉತ್ಸಾಹವನ್ನು ಮೈಗಂಟಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇಂಥ ಕೆರೆಗಳ ಪೈಕಿ ಮೊದಲ ಸುತ್ತಿನಲ್ಲಿ ೧೦ ಕೆರೆಗಳನ್ನು ಗುರುತಿಸಿ ಅವುಗಳಿಗೆ ಕಾಯಕಲ್ಪಕೊಡುವ ಸಾಹಸಕ್ಕೆ ಕೈಹಾಕಿದ್ದಾರೆ.

ಈ ಕಾಮಗಾರಿ ಸುಮಾರು ೬ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ೧೦ ಕೆರೆಗಳನ್ನು ಜಲಸಂಪನ್ಮೂಲ ಮತ್ತು ಅಂತರ್ಜಲವೃದ್ದಿ ಅಭಿಯಾನ ಮಾಡುತ್ತಿದ್ದಾರೆ. ಕೆರೆಗಳಿಗೆ ಗುದ್ದಲಿ ಪೂಜೆಯನ್ನು ನೆರವೇರವೇರಿದ್ದಾರೆ. ಈ ಕೆರೆಗಳನ್ನು ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಅನುದಾನ ಪಡೆದು ಪುನರ್ ಬಳಕೆ ಮಾಡಲಾಗುತ್ತಿದೆ.ಒಂದು ಕಾಲದಲ್ಲಿ ಅತಿಯಾದ ನೀರಿನ ಸಂಪನ್ಮೂಲ ಹೊಂದಿ ಸುಭಿಕ್ಷವಾಗಿದ್ದ ಕೆರೆಗಳು ಕಾಲಕ್ರಮೇಣ ನೀರಿನ ದುರ್ಬಳಕೆಯಿಂದ ಮತ್ತು ಜನರ ಅನಾಸಕ್ತಿಯಿಂದ ಮೂಲ ಕಳೆದುಕೊಂಡವು. ಈಗ ಈ ಕೆರೆಗಳನ್ನು ಪುನರ್ ಬಳಕೆ ಮಾಡಲು ಸರ್ವ ಪ್ರಯತ್ನ ಮಾಡಲಾಗುವುದು ಅವರ ಗುರಿಯಾಗಿದೆ.

ಜನರಿಗೆ ಕುಡಿಯುವ ನೀರು ಒದಗಿಸುವುದು ಮತ್ತು ಅಂತರ್ಜಲವನ್ನು ಹೆಚ್ಚಿಸಿ ಅಗತ್ಯವಿದ್ದಾಗ ಜಾನುವಾರುಗಳಿಗೆ, ಜನರಿಗೆ ಕುಡಿಯಲು ಅನುಕೂಲವಾಗುವಂತೆ ಮಾಡಲಾಗುವುದು. ಕೆರೆಗಳ ಹೂಳು ತೆಗೆದು, ತಡೆಗೋಡೆಗಳನ್ನು ನಿರ್ಮಾಣ ಮಾಡಿ ಜನರು ನಿರಾತಂಕಾವಾಗಿ ಈ ನೀರನ್ನು ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವುದು ಮೂಲ ಉದ್ದೇಶ. ಇದರೊಂದಿಗೆ ಇಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುವಂತೆ ಮಾಡಲಾಗುವುದು ಕೂಡಾ ಶಾಸಕ ಜೆ.ಆರ್.ಲೋಬೊ ಅವರು ಕೈಗೊಂಡಿರುವ ಇಚ್ಚೆ.

ಈಗಾಗಲೇ ಜಪ್ಪಿನಮೊಗರು ಕೋರ್ದಬ್ಬು ದೈವಸ್ಥಾನದ ಎರಡು ಕೆರೆಗಳನ್ನು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಣ್ಣ ನೀರಾವರಿ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಿ ಉದ್ಘಾಟನೆ ಮಾಡಿದ್ದಾರೆ.

ಬೈರಾಡಿಕೆರೆ, ಗುಜ್ಜರಕೆರೆ, ಬಜಾಲ ಶಾಂತಿ ನಗರದಲ್ಲಿರುವ ಕುಂಬಳ ಕೆರೆ, ಕೆಂಬಾರ್ ಪ್ರಶಾಂತ ಭಾಗ್ ನಲ್ಲಿರುವ ಕೆರೆ, ನಿಡ್ಡೇಲ್ ಭಟ್ರಕಟ್ಟ ಬಳಿ ಶಾಶ್ವತ ವಡ್ಡು ನಿರ್ಮಾಣ, ಕದ್ರಿ ಜೋಗಿ ಮಠದ ಬಳಿ ಇರುವ ಕೆರೆ, ಕದ್ರಿ ಕೈಬಟ್ಟಲಿನ ಡಾಕ್ಟರ್ಸ್ ಕಾಲನಿ ಕೆರೆಗಳು , ಪಿಲಿಕುಳದಲ್ಲಿ ಎರಡು ಆರಂಭದಲ್ಲಿ ಪುನರುಜ್ಜೀವನವಾಗಲಿವೆ .

ಮೊದಲು ಕೆರೆಗಳ ವಿಸ್ತೀರ್ಣವನ್ನು ಗುರುತು ಮಾಡಬೇಕು. ಎಲ್ಲೆಲ್ಲಿ ಒತ್ತುವರಿಯಾಗಿವೆಯೋ ಅವುಗಳನ್ನು ತೆರವು ಮಾಡಬೇಕು. ಕೆರೆಗಳ ನೀರನ್ನು ಕಲುಷಿತ ಮಾಡದಂತೆ ಎಚ್ಚರಿಕೆಯನ್ನು ಶಾಸಕರು ಕೊಟ್ಟಿದ್ದಾರೆ.

ಈ ಕೆರೆಗಳಿಗೆ ಸಣ್ಣನೀರಾವರಿ ಇಲಾಖೆಯ ಮೂಲಕ ಅನುದಾನ ಒದಗಿಸಿ ಅಧಿಕಾರಿಗಳು ಆರು ತಿಂಗಳ ಒಳಗೆ ಪೂರ್ಣಗೊಳಿಸಿ ಆ ನೀರನ್ನು ಸಾರ್ವಜನಿಕರು ಬಳಕೆ ಮಾಡವಂತೆ ಶಾಸಕ ಜೆ.ಆರ್.ಲೋಬೊ ಅವರು ಗುರಿನೀಡಿದ್ದಾರೆ. ಈ ಗುರಿಯನ್ನು ಅರಿತುಕೊಂಡಿರುವ ಅಧಿಕಾರಿಗಳು ಈಗ ಶಾಸಕರ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ.

ಇದು ಮಾತ್ರವಲ್ಲದೆ ಶಾಸಕ ಜೆ.ಆರ್.ಲೋಬೊ ಅವರು ಈ ಕೆರೆ ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ನೆರವುಪಡೆಯುತ್ತಿದ್ದಾರೆ. ಮಂಗಳೂರು ನಗರಾಭಿವೃದ್ಧಿ ಇಲಾಖೆ ಕೂಡಾ ಕೈಜೋಡಿಸಿದೆ. ಈ ಕೆರೆಗಳಿಗೆ ಸ್ಥಳೀಯ ಸಂಸ್ಥೆಗಳು ಕೂಡಾ ಕೈಜೋಡಿಸಿದರೆ ಅವುಗಳ ನಿರ್ವಹಣೆ ಸುಲಭ ಎನ್ನುವುದು ಇದರ ಗುಟ್ಟು. ಸಾಮೂಹಿಕ ಕ್ರಮಗಳು ಹೆಚ್ಚು ಪರಿಣಾಮಕಾರಿ ಎಂಬುದನ್ನು ಅರಿತಿರುವ ಶಾಸಕರು ಸ್ಥಳೀಯ ಕಾರ್ಪೊರೇಟರ್ ಗಳನ್ನು ಇವುಗಳ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸಿದ್ದಾರೆ. ಸ್ಥಳೀಯವಾಗಿ ಪ್ರತಿಯೊಂದು ಕೆರೆಗೆ ಸ್ಥಳೀಯ ಸಮಿತಿಯನ್ನು ನಿರ್ಮಾಣ ಮಾಡಿದ್ದಾರೆ.

ಶಾಸಕ ಜೆ.ಆರ್.ಲೋಬೊ ಅವರ ಕಲ್ಪನೆಯೆಂದರೆ ಈ ಕೆರೆಗಳು ಬರೇ ಕೆರೆಗಳಾಗಿಯೇ ಇದ್ದರೆ ಸಾಲದು. ಇವು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಈಜು ಕೊಳಗಾಗಿ ಮುಂದೆ ವಿಹಾರ ಧಾಮಗಳಿಗೆ ಪರಿವರ್ತನೆಯಾಗಬೇಕು ಎನ್ನುವ ಕನಸು. ಅದಕಾಗಿಯೇ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನಿರ್ಮಾಣ ಹಂತದಲ್ಲಿಯೇ ಈ ವಿನ್ಯಾಸವನ್ನೂ ಸೇರಿಸಿದ್ದಾರೆ. ಈ ಕೆಲಸಗಳು ಅಂದುಕೊಂಡಂತೆ ಆದರೆ ಮುಂದೊಂದು ದಿನ ಮಂಗಳೂರಲ್ಲಿ ಈ ಕೆರೆಗಳು ಗಮನಸೆಳೆಯುತ್ತವೆ.