ಮಂಗಳೂರು: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಉತ್ತಮ ಜನಪರ ಆಯವ್ಯಯ ಬಜೆಟ್ ಅನ್ನು ನೀಡಿರುವುದಕ್ಕೆ ಶಾಸಕ ಜೆ.ಆರ್.ಲೋಬೊ ಮುಖ್ಯಮಂತ್ರಿಯವರನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಅವರು ಹೇಳಿಕೆ ನೀಡಿದ್ದು ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಬಜೆಟ್ ಜನತೆಗೆ ವರವಾಗಿದೆ. ಅಲದೆ ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ ಎಂದಿದ್ದಾರೆ.

ಮತ್ಸಾಶ್ರಯ ಯೋಜನೆಯಲ್ಲಿ ಬಡ ಮೀನುಗಾರರಿಗೆ ಮನೆಗಳ ಆಶ್ರಯ ಮಹಿಳಾ ಸ್ವಸಹಾಯ ಗುಂಪುಗಳ್ಗೆ ಶೂನ್ಯ ಬಡ್ಡಿದರದಲ್ಲಿ ಸಹಕಾರ ಸಂಘಗಳ ಮೂಲಕ ಸಾಲ, ಸರ್ಕಾರಿ ಶಾಲೆಗಳಲ್ಲಿ 1 ನೇ ತರಗತಿಯಿಂದ ಪರಿಣಾಮಕಾರಿಯಾಗಿ ಆಂಗ್ಲ ಭಾಷೆಯ ಭೋಧನೆ, 8 ರಿಂದ 10 ನೇ ತರಗತಿ ಹೆಣ್ಣು ಮಕ್ಕಳಿಗೆ ಚೂಡಿದಾರ, ಸಮವಸ್ತ್ರ,, ವಾರದಲ್ಲಿ 5 ದಿನ ಹಾಲು ವಿತರಣೆ, ಶೂ, ಸಾಕ್ಸ ವಿತರಣೆ, ಗರ್ಭಿಣಿ, ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಒದಗಿಸುವ ಯೋಜನೆ, ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ವಿತರಣೆ, ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕರಿಗೆ ಅನುಕ್ರಮಾವಗಿ 1500 ಮತ್ತು 750 ಗೌರವ ಧನ ಹೆಚ್ಚಳ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿರುವುದು ಶ್ಲಾಘನೀಯ ಎಂದಿದ್ದಾರೆ.

ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಜನರಿಗೆ ಹೊಸ ಯೋಜನೆಗಳು, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡಿರುವುದು ಕೂಡಾ ಸ್ವಾಗತಾರ್ಹ ಕ್ರಮ.

ಮೂಲಭೂತ ಸೌಕರ್ಯಗಳನ್ನು ಕರಾವಳಿಗೆ ಒದಗಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳು ಅರ್ಥಪೂರ್ಣವಾಗಿವೆ. ಮಂಗಳೂರು ಮೀನುಗಾರಿಕಾ ಬಂದರಿನ ಅಭಿವೃದ್ಧಿ, ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ಮಂಗಳೂರು ಸಮೀಪ ಸಸಿಹಿತ್ಲುನಲ್ಲಿ ಸರ್ಪಿಂಗ್ ಫೆಸ್ಟಿವಲ್, ಮಂಗಳೂರು ವಿಮಾನ ನಿಲ್ದಾಣ ವಿಸ್ತರಣೆ, ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ,, ಮಂಗಳೂರಿನಲ್ಲಿ ಹಜ್ ಭವನ ಸ್ಥಾಪನೆ, ಪಶ್ಚಿಮ ವಾಹಿನಿ ಯೋಜನೆ, ಕ್ರಿಶ್ಚನ ಅಭಿವೃದ್ಧಿ ಸಮಿತಿಗೆ 153 ಕೋಟಿಯಿಂದ 175 ಕೋಟಿ ಅನುದಾನ ಏರಿಕೆ, ಅಲ್ಪ ಸಂಖ್ಯಾತರು ವಾಸಿಸುವ ಪ್ರದೇಶದಲ್ಲಿ ಅಭಿವೃದ್ಧಿಗೆ 800 ಕೋಟಿ ಯೋಜನೆ, ಮಂಗಳೂರು ಸ್ಮಾರ್ಟ್ ಸಿಟಿಗೆ ಅನುದಾನವನ್ನು ನೀಡಲಾಗಿದೆ.

ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ನನ್ನ ಅಧ್ಯಕ್ಷತೆಯಲ್ಲಿ ಅನಿವಾಸಿ ಭಾರತಿಯರ ಕುರಿತು ನೀಡಿರುವ ವರದಿಯನ್ನು ಅಂಗೀಕರಿಸಿ ಕೇರಳ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೂಡಾ ಅನಿವಾಸಿ ಭಾರತಿಯರ ಅಭಿವೃದ್ಧಿಗೆ ಯೋಜನೆ ರೂಪಿಸುವ ಪ್ರಸ್ತಾಪವನ್ನು ಮಾಡಿದ್ದು ಇದನ್ನು ಅಭಿನಂದಿಸುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.