ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಪಂಪ್ ವೆಲ್ ವೃತ್ತದಿಂದ ಜಪ್ಪಿನಮೊಗರು ಎಕ್ಕೂರುವರೆಗೆ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ಮಾಡಿದರು.

ರಾಷ್ಟೀಯ ಹೆದ್ದಾರಿ ಆಧಿಕಾರಿಗಳು ಹಾಗೂ ಮ.ನ.ಪಾ ಆಧಿಕಾರಿಗಳೂ ಮತ್ತು ಮ.ನ.ಪಾ ಸದಸ್ಯರೊದಿಗೆ ಪಂಪುವೆಲ್ ಕಾಮಗಾರಿಗಳಿಂದ ತೊಂದರೆಗೊಳಗಾದ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅವರು ಮತನಾಡಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದ ಲೋಬೊ ಸಾರ್ವಜನಿಕರ ತೊಂದರೆಗಳ ಬಗ್ಗೆ ಶೀಘ್ರವಾಗಿ ಪರಿಹಾರ ಒದಗಿಸುವಂತೆಯೂ ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರೊಜೆಕ್ಟ್ ಡೈರೆಕ್ಟರ್ ಸ್ಯಾಮ್ಸ್ ಸನ್ ವಿಜಯ ಕುಮಾರ್,, ಬಾನು, ಮ.ನ.ಪಾ ಅಧಿಕಾರಿಗಳಾದ ಗುರುರಾಜ್ ಮರಳಹಳ್ಳಿ, ರಘುಪಾಲ್, ಬಾಲಕೃಷ್ಣ ಗೌಡ, ನರೇಶ್ ಶೆಣೈ, ರೂಪಾ, ಮ.ನ.ಪಾ ಸದಸ್ಯರಾದ ಆಶಾಡಿಸಿಲ್ವಾ, ಲ್ಯಾನ್ಸಿ ಲಾರ್ಟ್ ಪಿಂಟೊ, ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಹಾಗೂ ಪ್ರಭಾಕರ್ ಶ್ರೀಯಾನ್, ಶಶಿಧರ್, ನೀರಾಜ್ ಪಾಲ್, ಅಲ್ವಾರಿಸ್ ಡಿಸಿಲ್ವ, ಜಗನ್ನಾಥ ಶೆಟ್ಟಿ, ಹರ್ಬಟ್ ಡಿಸೋಜ, ಹೇಮಂತ್ ಗರೋಡಿ ಉಪಸ್ಥಿತರಿದ್ದರು.