ಮಂಗಳೂರು: ಹಾಕಿ ಭಾರತೀಯ ಕ್ರೀಡೆಯಾಗಿದ್ದು ಇದನ್ನು ಬೆಳೆಸಿ ಉಳಿಸುವ ಅಗತ್ಯವಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಇಂದು ಬೆಳಿಗ್ಗೆ ಕರಾವಳಿ ಉತ್ಸವದ ಅಂಗವಾಗಿ ಹಾಕಿ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಾಕಿ ಕ್ರೀಡೆಗೆ ಬೇಕಾದ ಪ್ರೋತ್ಸಾಹವನ್ನು ನೀಡುವುದಾಗಿ ಭರವಸೆ ನೀಡಿದ ಅವರು ಈ ಕ್ರೀಡೆಯನ್ನು ಜನರು ಮೆಚ್ಚುವಂತೆ ಮಾಡಬೇಕು. ಇದು ಶಾರೀರಿಕವಾಗಿಯೂ ಹೆಚ್ಚಿನ ಪ್ರಯೋಜನ ನೀಡುತ್ತದೆ. ಇದಕ್ಕೆ ಜನರೂ ಕೂಡಾ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.