Home » Website » News from jrlobo's Office » ಹಮಾಲಿ ಕಾರ್ಮಿಕರಿಗೆ ಕಡ್ದಾಯವಾಗಿ ಐಡಿ ಕೊಡುವಂತೆ ಕಾರ್ಮಿಕ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚನೆ
JRLobo
Photography of JRLobo in office

ಹಮಾಲಿ ಕಾರ್ಮಿಕರಿಗೆ ಕಡ್ದಾಯವಾಗಿ ಐಡಿ ಕೊಡುವಂತೆ ಕಾರ್ಮಿಕ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಸೂಚನೆ

ಮಂಗಳೂರು: ಹಮಾಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಐಡಿ ಕಾರ್ಡ್ ನೀಡಬೇಕು, ಯಾರು ಹಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಗುರುತಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ನಿನ್ನೆ ತಮ್ಮ ಕದ್ರಿ ಕಚೇರಿಯಲ್ಲಿ ಹಮಾಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ ಅವರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರನ್ನು ಗುರುತಿಸುವ ಕೆಲಸವನ್ನು ಕಾರ್ಮಿಕ ಇಲಾಖೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಯಾವ ಅನುಕೂಲಗಳಿವೆ ಎಂಬುದರ ಬಗ್ಗೆಯೂ ಕಾರ್ಮಿಕ ಇಲಾಖೆ ಕೂಲಂಕಷ ತನಿಖೆ ಮಾಡಬೇಕು. ಈ ಕೆಲಸ ನಿರ್ವಹಿಸಲು ಕಾರ್ಮಿಕ ಇಲಾಖೆಗೆ ತೋದರೆ ಏನೂ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಅವರು ಮುಂದಿನ ವಾರ ಮತ್ತೆ ಸಭೆ ನಡೆಸುತ್ತೇನೆ. ಆಗ ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಅಧಿಕಾರಿಯವರು ಕಡ್ಡಾಯವಾಗಿ ಹಾಜರಾಗಬೇಕು ಎಂದರು.

ಕಾರ್ಮಿಕ ಇಲಾಖೆ ಹಮಾಲಿಗಳನ್ನು ಗುರುತಿಸಬೇಕು. ಕೃಷಿಉತ್ಪನ್ನ ಇಲಾಖೆ ಸೂಕ್ತ ಐಡಿಯನ್ನು ನೀಡಬೇಕು ಎಂದೂ ಸೂಚಿಸಿದರು.