ಮಂಗಳೂರು: ಎಲ್ಲ ದೇವರುಗಳ ಮೂಲತತ್ವ ಒಂದೇ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಂಡು ನಾವು ಮುನ್ನಡೆಯಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ನುಡಿದರು.
ಅವರು ಇತಿಹಾಸ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನಕ್ಕೆ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿಯನ್ನು ಕೊಡಿಸಿದ್ದು ಈ ಸಂಬಂಧ ಅವರು ಸರ್ಕಾರದ ಮಂಜೂರಾತಿ ಪತ್ರವನ್ನು ದೇವಸ್ಥಾನದವರಿಗೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.

ಒಂದು ಕಾಲದಲ್ಲಿ ಇಲ್ಲಿ ಪುಟ್ಟ ದೇವಸ್ಥಾನವಾಗಿತ್ತು. ಅದನ್ನು ಎಲ್ಲರೂ ಸೇರಿಕೊಂಡು ಒಂದೇ ಮನಸ್ಸಿನಿಂದ ಪೂಜಿಸಿ ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದೀರಿ, ನಿಜಕ್ಕೂ ನಾವೆಲ್ಲರೂ ಹೆಮ್ಮೆಪಡಬೇಕು ಎಂದು ಪ್ರಶಂಸಿಸಿದರು.

ಎಲ್ಲರೂ ಒಂದಾಗಿದ್ದರೆ ಏನನ್ನಾದರೂ ಸಾಧಿಸಬಹುದೂ ಎನ್ನುವುದನ್ನು ಇಲ್ಲಿನವರು ಸಾಧಿಸಿ ತೋರಿಸಿದ್ದಾರೆ ಎಂದು ನುಡಿದ ಅವರು ಇದು ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿದ್ದು ಇಲ್ಲಿಗೆ ಬರುವ ಭಕ್ತಾಧಿಗಳ ಸಂಖ್ಯೆಯೂ ಹೆಚ್ಚುತ್ತಿದೆಯಾದ್ದರಿಂದ ಇಲ್ಲಿಗೆ ಬರುವ ರಸ್ತೆಯನ್ನು ಅಗಲೀಕರಣಗೊಳಿಸುವ ಅಗತ್ಯವನ್ನು ಮನಗಂಡು ಸಂಪರ್ಕ ವ್ಯವಸ್ಥೆಯನ್ನು ಮಾಡುವ ಪ್ರಯತ್ನವಾಗಿದೆ ಎಂದರು.
ದೇವಸ್ಥಾನಕ್ಕೆ ಸರ್ಕಾರದ ವತಿಯಿಂದ 10 ಲಕ್ಷ ರೂಪಾಯಿ ಒದಗಿಸಿಕೊಟ್ಟಿರುವುದಕ್ಕಾಗಿ ಆಡಳಿತದವರು ಶಾಸಕ ಜೆ.ಆರ್.ಲೋಬೊ ಅವರಿಗೆ ಸನ್ಮಾನಿಸಿದರು.

ಕಾರ್ಪೊರೇಟರ್ ಗಳಾದ ಕೇಶವ ಮರೋಳಿ, ಭಾಸ್ಕರ್ ಕೆ, ಆಶಾ ಡಿಸಿಲ್ವಾ, ಪ್ರಕಾಶ್, ದೇವಸ್ಥಾನದ ವತಿಯಿಂದ ಬಾಲಕೃಷ್ಣ ಕೊಟ್ಟಾರಿ, ಕೆ.ಪಿ.ಶೆಟ್ಟಿ. ಗಿರಿಧರ ಶೆಟ್ಟಿ ಹಾಗೂ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.