ಶಾಸಕರಾದ ಶ್ರೀ ಜೆ.ಆರ್. ಲೋಬೋರವರು ಗೋವಾ ರಾಜ್ಯದ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಗೋವಾ ರಾಜ್ಯದ ಮಡಂಗಾವ್‍ನ ಪತೋಡ ವಿಧಾನಸಭಾ ಕ್ಷೇತ್ರದಲ್ಲಿ 2 ದಿನಗಳ ಕಾಲ ಈ ಕ್ಷೇತ್ರದ ಅಭ್ಯರ್ಥಿಯಾದ ಜೊಸೆಫ್ ಸಿಲ್ವರವರ ಪರ ಮನೆಮನೆಗೆ ತೆರಳಿ ಮತ ಯಾಚಿಸಿದರು.

ಈ ಪ್ರದೇಶದÀ ಸುಮಾರು 30,000 (ಮೂವತ್ತು ಸಾವಿರ) ಮತದಾರರಿರುವ ಪ್ರದೇಶದಲ್ಲಿ ಸುಮಾರು 4000 ಮತದಾರರು ಕರ್ನಾಟಕ ಮೂಲದವರು. ಇವರನ್ನು ಭೇಟಿ ಮಾಡಿದ ಶಾಸಕರು ಇವರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು. ಇವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಶಾಸಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಒಲವನ್ನು ಸೂಚಿಸಿರುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ಜೊಸೆಫ್ ಸಿಲ್ವ ಂIಅಅಯ ಪ್ರತಿನಿಧಿಗಳು, ಮಂಗಳೂರಿನ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

ಇದಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ದಿಗಂಬರ ಕಾಮತ್ ಂIಅಅ ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಲೂವಿ ಜೊಲ್ ಫೆಲೆರಿಯಾರವರ ಜೊತೆ ತೆರಳಿ ಶಾಸಕರು ಮತ ಯಾಚಿಸಿದರು. ಶಾಸಕರು ಗೋವಾ ಭೇಟಿಯ ಸಂದರ್ಭದಲ್ಲಿ ಂIಅಅ ಯ ಪ್ರಧಾನ ಕಾರ್ಯದರ್ಶಿಗಳಾದ ದಿಗ್ವಿಜಯ ಸಿಂಗ್ ಕಾರ್ಯದರ್ಶಿ ಸೆಲ್ವ ಕುಮಾರ್, ಸಚಿನ್ ಪೈಲಟ್‍ರವರನ್ನು ಭೇಟಿ ಮಾಡಿದರು.