ಮಂಗಳೂರು: ಮಂಗಳೂರು ಹಳೇ ಬಂದರು ವೆಸಲ್ ಲೋಡಿಂಗ್ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜೆ.ಆರ್.ಲೋಬೊ ಅವರಿಗೆ ಅಲ್ಲಿನ ಸಾರ್ವಜನಿಕರು ತಾವು ಪಡುತ್ತಿರುವ ಬವಣೆಗಳ ಬಗ್ಗೆ ಗಮನ ಸೆಳೆದಾಗ ತಕ್ಷಣ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಸ್ವಚ್ಛತೆ ಇಲ್ಲದಿರುವ ಬಗ್ಗೆ ಗಂಭೀರ ಆರೋಪ ಮಾಡಿದಾಗ ತಕ್ಷಣ ಸ್ಪಂದಿಸಿದ ಶಾಸಕರು ಅಧಿಕಾರಿಗಳಿಗೆ ಅಲ್ಲಿರುವ ಕಸ, ಕಡ್ಡಿ, ನಿರುಪಯುಕ್ತ ವಸ್ತುಗಳನ್ನು ತೆರವು ಮಾಡಿ ಶುದ್ಧತೆ ಕಾಪಾಡುವಂತೆ ಆದೇಶಿಸಿದರು.

ವೆಸಲ್ ಲೋಡಿಂಗ್ ಮಾಡುವಾಗ ಪರಿಸರದ ಕಾಳಜಿ ವಹಿಸಿ ಪರಿಸರವನ್ನು ಕಾಪಾಡಬೇಕು. ಬೇಕಾಬಿಟ್ಟಿಯಾಗಿ ವಸ್ತುಗಳನ್ನು ಚೆಲ್ಲಿ ಪರಿಸರದ ಸ್ವಚ್ಛತೆಯನ್ನು ಹಾಳುಮಾಡಬಾರದು ಎಂದು ಬುದ್ಧಿವಾದ ಹೇಳಿದರು.

ಕುಡಿಯುವ ನೀರು, ಶೌಚಾಲಯದ ಬಗ್ಗೆಯು ಕಾಳಜಿ ವಹಿಸುವಂತೆ ಹೇಳಿದ ಶಾಸಕ ಜೆ.ಆರ್.ಲೋಬೊ ಸಾಧ್ಯವಾದಷ್ಟರ ಮಟ್ಟಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ಶಾಸಕರ ಭೇಟಿ ವೆಸಲ್ ಲೋಡಿಂಗ್ ಸ್ಥಳದ ಬಗ್ಗೆ ಗಂಭೀರ ಪರಿಣಾಮವನ್ನು ಉಂಟುಮಾಡಿತು. ಶಾಸಕರ ಅಹವಾಲು ಆಲಿಸಿದ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.