ಮಂಗಳೂರು ಮಹಾನಗರದ ಶಕ್ತಿನಗರ ಮುಖ್ಯ ರಸ್ತೆಯ ಕಾಂಕ್ರಿಟೀಕರಣದ ಕಾಮಗಾರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊರವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭವಿಷ್ಯದಲ್ಲಿ ಶಕ್ತಿನಗರ ಪ್ರದೇಶ ಸಾಟ್ ಲೈಟ್ ನಗರವಾಗಿ ಪರಿವರ್ತನೆಗೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಇರಾದೆಯಲ್ಲಿದ್ದೇವೆ. ಶಾಲೆ, ಕಾಲೇಜುಗಳು, ದೊಡ್ಡ ಕಟ್ಟಡಗಳು ಈ ಪ್ರದೇಶದಲ್ಲಿದ್ದು, ಇಲ್ಲಿನ ಹೆಚ್ಚಿನ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿದೆ. ಭಾಕಿ ಉಳಿದ ರಸ್ತೆಗಳಿಗೆ ಕಾಂಕ್ರಿಟೀಕರಣಗೊಳಿಸುವ ನಿಟ್ಟಿನಲ್ಲಿ ಇಂದು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಸುಮಾರು 500 ಮೀಟರ್ ಉದ್ದ ಹಾಗೂ 7 ಮೀಟರ್ ಅಗಲದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಈಗಾಗಲೇ ಸರಕಾರದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಲೋಕೊಪಯೋಗಿ ಇಲಾಖೆಯ ಸಚಿವರಾದ ಶ್ರೀ.ಡಾ|| ಮಹಾದೇವಪ್ಪರವರಿಗೆ ಮಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಮನವಿ ಸಲ್ಲಿಸಿದಾಗ ಅದಕ್ಕೆ ಸ್ಪಂದಿಸಿ ರೂ.10 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಿ ಅದರಲ್ಲಿ ಈ ಕಾಮಗಾರಿಯನ್ನು ತೆಗೆದುಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮೇಯರ್ ಶ್ರೀ ಭಾಸ್ಕರ್ ಕೆ, ಕಾರ್ಪೋರೇಟರ್ ಅಖಿಲಾ ಆಳ್ವ, ಅಧಿಕಾರಿಗಳಾದ ರವಿಕುಮಾರ್, ನರೇಶ್ ಶೆಣೈ, ರಿಚಾರ್ಡ್ ಡಿಸೋಜ, ಉಧ್ಯಮಿ ಕೆ.ಸಿ.ನಾಯ್ಕ್, ಕಾಂಗ್ರೆಸ್ ಮುಖಂಡರುಗಳಾದ ಉಮೇಶ್ ದಂಡೆಕೇರಿ, ಯಶವಂತ, ರವೀಂದ್ರ ನಾಯಕ್, ಬ್ಯಾಪ್ಟಿಸ್ಟ್ ಡಿಸೋಜ, ಜಯಲಕ್ಷ್ಮೀ ಉಪಸ್ಥಿತರಿದ್ದರು.