ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಶಕ್ತಿನಗರ (ನೀತಿನಗರ) ಕೊಳಚೆ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಯಿತು. 20 ಲಕ್ಷ ರೂಪಾಯಿ ವೆಚ್ಚದ ಯೋಜನೆಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಶಿವಮೊಗ್ಗ ಇದರ ವತಿಯಿಂದ ಶಾಸಕ ಜೆ.ಆರ್.ಲೋಬೊ ಅವರ ಶಿಫಾರಸಿನ ಮೇರೆಗೆ ಮಂಜೂರು ಮಾಡಲಾಯಿತು.

ಗುದ್ದಲಿ ಪೂಜೆಯನ್ನು ಸ್ಥಳೀಯ ಕಾರ್ಪೊರೇಟರ್ ಕೆ. ಜುಬೇದ್ ನೆರವೇರಿಸಿದರು. ಮಾಜಿ ಮೇಯರ್ ಅಬ್ದುಲ್ ಅಜೀಜ್, ಯುವ ಕಾಂಗ್ರೆಸ್ ಮುಖಂಡ ಸುನೀತ್ ಡೇಸಾ, ವಾರ್ಡ್ ಅಧ್ಯಕ್ಷ ಕುಮಾರ್, ಸ್ಥಳೀಯ ನಾಯಕರಾದ ಕೃಷ್ಣ ಕುಮಾರ್, ಪ್ರಭಾ, ಸೆಲೆಸ್ತಿನ್ ಮುಂತಾದವರು ಉಸ್ಥಿತರಿದ್ದರು.