ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ನೇತೃತ್ವದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು 21ನೇ ಪದವು ಪಶ್ಚಿಮ ಮತ್ತು 35ನೇ ಪದವು ಸೆಂಟ್ರಲ್ ವಾರ್ಡು ಸಮಿತಿಯೊಂದಿಗೆ, ಕೆ.ಎಂ.ಸಿ, ಎ.ಜೆ. ಆಸ್ಪತ್ರೆ ಹಾಗು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್‍ನ ಸಹಯೋಗದೊಂದಿಗೆ ನಾಲ್ಕನೆÉ ‘ಉಚಿತ ವೈದ್ಯಕೀಯ ಶಿಬಿರ’, ಶಕ್ತಿನಗರದ ನಾಲ್ಯಪದವು ಸರಕಾರಿ ಶಾಲೆಯಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಡಿದ ಶಾಸಕರು, ಜನ ಸೇವೆಯ ಮೂಲಕ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟಿಸಲು ನನ್ನ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡಿನಲ್ಲಿ ಇಂತಹ ಹಲವರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಈಗಾಗಲೆ ಕಪಿತಾನೀಯೋ, ಮಂಗಳಾದೇವಿ ಹಾಗು ಕುದ್ರೋಳಿಯಲ್ಲಿ ನಡೆದ ಮೂರು ಉಚಿತ ವೈದ್ಯಕೀಯ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿರುವುದು ನನಗೆ ಸಂತೊಷ ತಂದ್ದಿದೆ. ಮುಂದಿನ ದಿನಗಳಲ್ಲಿ ಜನ ಸಂಪರ್ಕ ಸಭೆ ಹಾಗು ಉಚಿತ ವೈದ್ಯಕೀಯ ಶಿಬಿರವನ್ನು ಪ್ರತಿ ತಿಂಗಳು ಬೇರೆ ಬೇರೆ ವಾರ್ಡ್‍ಗಳಲ್ಲಿ ಅಯೋಜಿಸಲಾಗುವುದು ಎಂದು ತಿಳಿಸಿದರು.

ಸರಕಾರದ ಅನುದಾನದ ಜೊತೆಗೆ, ಸ್ಥಳಿಯ ದಾನಿಗಳನ್ನು ಒಟ್ಟು ಸೇರಿಸಿ, ಬಡ ಜನರಿಗೆ ಉಪಯೋಗವಾಗುವಂತಹ ಹಲವು ಕಾರ್ಯಕ್ರಮಗಳನ್ನು ಬೇರೆ ಬೇರೆ ಪ್ರದೇಶದಲ್ಲಿ ಹಮ್ಮಿಕೊಳ್ಳುತ್ತೇವೆ. ಈ ಶಿಬಿರದಲ್ಲಿ ಕಾಯಿಲೆಗಳ ಪರೀಕ್ಷೆ, ಉಚಿತ ಕನ್ನಡಕ, ಅಗತ್ಯವುಳ್ಳವರಿಗೆ ಔಷದಿ, ದಂತ ತಪಸಣೆ ಹಾಗು ರಕ್ತದಾನ ಶಿಬಿರ ವಿವಿದ ಅಸ್ಪತ್ರೆಯ ಸಹಯೋಗದಿಂದ ಅಯೋಜಿಸಿಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಕಾರ್ಪೋರೆಟರ್ ಆಖೀಲಾ ಆಳ್ವ, ಜುಬೈದಾ ಆಜೀಜ್, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ದಾಸ್, ಮುಖಂಡರಾದ ಪ್ರಭಾಕರ್ ಶ್ರೀಯಾನ್, ಅಜೀಜ್, ಟಿ.ಕೆ ಸುಧೀರ್, ಆಲ್ವಿನ್ ಪಾಯಸ್, ಅಸ್ಲಮ್ ಬಂದರ್, ರಮಾನಂದ್ ಪೂಜಾರಿ, ಗಣೇಶ್ ಗುಜ್‍ರಾನ್, ಸುನೀತ್ ಡೆ’ಸಾ, ಅನಂದ್, ರಮೇಶ್ ನಾಯಕ್, ಯಶವಂತ್, ಡೆನಿಸ್ ಡಿ’ಸಿಲ್ವ, ಕುಮಾರ್, ಶೇಕರ್ ಪೂಜಾರಿ, ಪದವು ಫೆಂಡ್ಸ್ ಸರ್ಕಲ್‍ನ ರವೀಂದ್ರ, ಪ್ರಗತಿ ಕೋಪರೆಟಿವ್ ಸೊಸ್ಶೆಟಿಯ ಮುಖ್ಯಸ್ಥರು ಉಪಸ್ಥಿತರಿದ್ದರು. ರವೀಂದ್ರ ನಾಯಕ್ ಕಾರ್ಯಕ್ರಮ ನೀರೂಪಿಸಿದರು.

ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ

Image from post regarding ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ

ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ

Image from post regarding ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ

ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ

Image from post regarding ಶಕ್ತಿನಗರದಲ್ಲಿ ಉಚಿತ ವೈದ್ಯಕೀಯ ಶಿಬಿರ