ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ‘ಎ’ ಹೋಬಳಿಯಲ್ಲಿ ಸುಮಾರು 192 ಆರ್ಹ ಬಡ ಜನರಿಗೆ ರಾಜ್ಯ ಸರಕಾರದಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶಾಸಕ ಜೆ.ಆರ್.ಲೋಬೊರವರು ಮಂಗಳೂರಿನ ಎನ್.ಜಿ.ಹೊ. ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿದರು.

ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ, ವೃದ್ಧ್ಯಾಪ್ಯ ವೇತನ, ಅಂಗವಿಕಲ ವೇತನ ಹಾಗೂ ವಿಧವಾ ವೇತನದ ಆಡಿಯಲ್ಲಿ ಅಯ್ಕೆಯಾದವರಿಗೆ ಪಿಂಚಣಿಯನ್ನು ನೀಡಲಾಯಿತು. ಶಾಸಕರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಇಂತಹ ಯೋಜನೆಯನ್ನು ಎಲ್ಲಾ ಅರ್ಹ ಬಡ ಜನರು ಪ್ರಯೋಜನ ಪಡೆಯುವಂತೆ ತಿಳಿಸಿದರು.

ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೋರೇಟರ್ ರಾಜನೀಶ್, ಅಬ್ದಲ್ ಲತೀಫ್, ತಹಶೀಲ್ದಾರ್ ಶೀವಶಂಕರಪ್ಪ, ಕಾಂದಯ ಆಧಿಕಾರಿಗಳು ಉಪಸ್ಥಿತರಿದ್ದರು.

jrlobo_ditributes_poor_facility_02jrlobo_ditributes_poor_facility_01jrlobo_ditributes_poor_facility_03