Home » Website » News from jrlobo's Office » ವಿಜಯನಗರ ಬಜಾಲ್ ನಲ್ಲಿ ಕಿರು ಸೇತುವೆ ನಿರ್ಮಾಣ ಮಾಡಿಸಿದ ಶಾಸಕ ಜೆ.ಆರ್.ಲೋಬೊ
ವಿಜಯನಗರ ಬಜಾಲ್ ನಲ್ಲಿ ಕಿರು ಸೇತುವೆ ನಿರ್ಮಾಣ ಮಾಡಿಸಿದ ಶಾಸಕ ಜೆ.ಆರ್.ಲೋಬೊ
Image from post regarding ವಿಜಯನಗರ ಬಜಾಲ್ ನಲ್ಲಿ ಕಿರು ಸೇತುವೆ ನಿರ್ಮಾಣ ಮಾಡಿಸಿದ ಶಾಸಕ ಜೆ.ಆರ್.ಲೋಬೊ

ವಿಜಯನಗರ ಬಜಾಲ್ ನಲ್ಲಿ ಕಿರು ಸೇತುವೆ ನಿರ್ಮಾಣ ಮಾಡಿಸಿದ ಶಾಸಕ ಜೆ.ಆರ್.ಲೋಬೊ

ಮಂಗಳೂರು: ವಿಜಯನಗರ ಬಜಾಲ್ ರೈಲ್ವೆ ಅಂಡರ್ ಪಾಸ್ ಹಿನ್ನೆಲೆಯಲ್ಲಿ ಈ ಪರಿಸರದ ಜನರಿಗೆ ಸಂಪರ್ಕ ರಸ್ತೆಯಿಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಇದೀಗ ಶಾಸಕ ಜೆ.ಆರ್.ಲೋಬೊ ಅವರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸಂಪರ್ಕ ಕಲ್ಪಿಸಲು ಕಿರು ಸೇತುವೆ ನಿರ್ಮಾಣ ಮಾಡಿಸಿದ್ದಾರೆ.

ಈಗ ಇಲ್ಲಿನ ಮನೆಗಳಿಗೆ ವಾಹನ ಸಂಚಾರದ ಸೌಕರ್ಯ ಒದಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇದಕ್ಕೆ ಸಾರ್ವಜನಿಕರು ಕೂಡಾ ಮುಂದಾಗಿ ಶಾಸಕರ ಶಿಫಾರಿಸಿಗೆ ಹರ್ಷ ವ್ಯಕ್ತಪಡಿಸಿದರು. ಅಲ್ಲಿನ ಜನರು ಶಾಸಕರನ್ನು ಸ್ವಾಗತಿಸಿ ಸನ್ಮಾನ ಮಾಡಿದರು.

ಇಲ್ಲಿನ ಜನರು ಸಂಪರ್ಕ ರಸ್ತೆಯಿಲ್ಲದೆ ಪರದಾಡುವ ಸ್ಥಿತಿಯನ್ನು ಮನಗಂಡು ಶಾಸಕರು ಮುಂದಿನ ದಿನಗಳಲ್ಲಿ ಒಳಚರಂಡಿ ವ್ಯವಸ್ಥೆ, ಹೆಚ್ಚುವರಿಯಾಗಿ ಮತ್ತೊಂದು ಸಂಪರ್ಕ ರಸ್ತೆಯನ್ನು ಕೂಡಾ ಕಲ್ಪಿಸುವುದಾಗಿ ಜೆ.ಆರ್.ಲೋಬೊ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಶಿರಾಜ್ ಅಂಬಟ್ಟಿ, ಮಾಜಿ ಉಪಮೇಯರ್ ಸೇಸಮ್ಮ, ಪ್ರತಿಭಾ, ಮೋಹಿನಿ ಗಟ್ಟಿ ,ಹೇಮಂತ್ ಗರೋಡಿ , ಸುಂದರ್ ಆಳ್ವ, ಅಹ್ಮದ್ ಬಾವಾ, ಸುಧಾಕರ್ ಜೆ ಮುಂತಾದವರಿದ್ದರು.