ಮಂಗಳೂರು: ಕಂಕನಾಡಿ ಬಿ ವಾರ್ಡ್ ನ ವಾಸುಕಿನಗರದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಜೆ.ಆರ್.ಲೋಬೊ ಅವರು ನಿನ್ನೆ ಉದ್ಘಾಟಿಸಿದರು. ಗ್ರಾಮೀಣ ಭಾಗದ ಜನರಿಗೆ ಅಗತ್ಯವಾದ ರಸ್ತೆ ನಿರ್ಮಾಣ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡುತ್ತಿದ್ದು ಇದರ ಅಂಗವಾಗಿ ವಾಸುಕಿನಗರದ ಜನರಿಗೆ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸುತ್ತಿರುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.

ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಂಡು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನೆರವು ಪಡೆಯಲು ತಮಗೆ ನೆರವಾಗಬೇಕೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ವಹಿಸಿದ್ದರು. ಈ ವೇಳೆ ಅಶೋಕ್ ರಾವ್, ಚಂದ್ರಶೇಖರ್, ಶಶಿಧರ್, ಪ್ರಭಾಕರ್ ಶ್ರೀಯಾನ್, ಸುಧಾಕರ್, ಕೃತಿನ್ ಕುಮಾರ್, ನವೀನ್ ಲೋಬೊ, ಉಮೇಶ್ ದೇವಾಡಿಗ, ರಾಜಗೋಪಾಲ್ ಮುಂತಾದವರಿದ್ದರು.