ಮಂಗಳೂರು: ರಾಜೀವ್ ಗಾಂಧಿ ಜನ್ಮ ದಿನಾಚರಣೆಯ ಅಂಗವಾಗಿ ಜೆಪ್ಪುವಿನಲ್ಲಿರುವ ಭಗಿನಿ ಸಮಾಜ ಇದರ ಆಶ್ರಯದಲ್ಲಿ ವಾಸಿಸುತ್ತಿರುವ ಬಡ ಮಕ್ಕಳಿಗೆ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ರಮಾನಂದ್ ಪೂಜಾರಿಯವರ ನೇತೃತ್ವದಲ್ಲಿ, ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಶಾಸಕ ಜೆ.ಆರ್. ಲೋಬೊರವರು ಮಾತನಾಡಿ ರಾಜೀವ್ ಗಾಂಧಿಯವರು ಅಧುನಿಕ ಭಾರತದ ಶಿಲ್ಪಿ. ಮಾಹಿತಿ ತಂತ್ರಜ್ಞಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ, ನಮ್ಮ ದೇಶಕ್ಕೆ ಅವರು ಪ್ರಧಾನಿ ಮಂತ್ರಿಯಾಗಿ ನೀಡಿದ ಅತಿ ದೊಡ್ಡ ಕೊಡುಗೆ. ನಮ್ಮ ದೇಶದಲ್ಲಿರುವ ಗಣಕಯಂತ್ರ, ದೂರಸಂಪರ್ಕ ಹಾಗು ಕೈಗಾರಿಕ ಕ್ರಾಂತಿಗೆ ರಾಜೀವ್ ಗಾಂಧಿಯವರ ದೂರದೃಷ್ಟಿಯೆ ಕಾರಣ. ದೇಶದಲ್ಲಿ ಯುವಕರಿಗೆ 18 ವರ್ಷದಲ್ಲಿಯೆ ಮತದಾನದ ಹಕ್ಕನ್ನು ನೀಡಿ ಯುವಕರಿಗೆ ರಾಜಕೀಯದಲ್ಲಿ ಅವಕಾಶ ಕಲ್ಪಿಸಿದರು. ಇದಲ್ಲದೆ, ನಮ್ಮ ದೇಶಕ್ಕೆ ಅವರ ಪ್ರಾಣವನ್ನೆ ಮುಡುಪಾಡಿಟ್ಟರು, ಎಂದು ಹೇಳಿದರು.

ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಜಿಲ್ಲಾ ಯುವ ಕಾಂಗ್ರೆಸ್ ಆಧಕ್ಷ ಮಿಥುನ್ ರೈ, ನಗರ ಯುವ ಕಾಂಗ್ರೆಸ್ ಆಧ್ಯಕ್ಷ ಮೆರೀಲ್ ರೇಗೊ, ಉಪಾಧ್ಯಕ್ಷ ರಮಾನಂದ್ ಪೂಜಾರಿ, ಭಗಿನಿ ಸಮಾಜದ ಮುಖ್ಯಸ್ಥೆ ಶಾಂತಿ ಪೈ ಮಕ್ಕಳನ್ನು ಉದ್ದೇಶಿಸಿ ಮಾತನಡಿದರು.

ಕಾರ್ಪೋರೇಟರ್ ರತಿಕಲಾ, ಶೈಲಜಾ, ಕವಿತಾ ವಾಸು, ಅಬ್ದುಲ್ ಲತೀಫ್, ಕಾಂಗ್ರೆಸ್ ಮುಖಂಡರಾದ ಟಿ.ಕೆ. ಸುಧೀರ್, ನಮಿತಾ ರಾವ್, ಬೆನೆಟ್ ಡಿ’ಮೆಲ್ಲೊ, ಹುಸೈನ್ ಬೋಳಾರ, ಸ್ಟಾನಿ ಆಲ್ವಾರಿಸ್, ಕೃತಿನ್ ಕುಮಾರ್, ಉದಯ್ ಕುಂದರ್, ದುರ್ಗಾ ಪ್ರಸಾದ್, ಸುಹೈಲ್ ಕಂದಕ್, ಸಂದಿಪ್ ಕುಮಾರ್, ಗೌತಮ್, ಉದಯ್, ಡೆನ್ಜಿಲ್, ಹರ್ಬಟ್ ಡಿ’ಸೂಜ, ನಾಗೇಂದ್ರ ಗೌಡ, ಆಶೋಕ್ ಕುಟುಪಾಡಿ, ನವಾಜ್ ಜೆಪ್ಪು, ಕೀರ್ತಿ ರಾಜ್, ವರುಣ್ ರಾಜ್ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ರಾಜೀವ್ ಗಾಂಧಿ ಅಧುನಿಕ ಭಾರತದ ಶಿಲ್ಪಿ: ಜೆ.ಆರ್. ಲೋಬೊ

Image from post regarding ರಾಜೀವ್ ಗಾಂಧಿ ಅಧುನಿಕ ಭಾರತದ ಶಿಲ್ಪಿ: ಜೆ.ಆರ್. ಲೋಬೊ

ರಾಜೀವ್ ಗಾಂಧಿ ಅಧುನಿಕ ಭಾರತದ ಶಿಲ್ಪಿ: ಜೆ.ಆರ್. ಲೋಬೊ

Image from post regarding ರಾಜೀವ್ ಗಾಂಧಿ ಅಧುನಿಕ ಭಾರತದ ಶಿಲ್ಪಿ: ಜೆ.ಆರ್. ಲೋಬೊ