ಮಂಗಳೂರು: ಮಂಗಳೂರಲ್ಲಿ ರಸ್ತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಂಕ್ರೀಟಿಕರಣಗೊಳಿಸಿ ಜನತೆಗೆ ಒದಗಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಇತ್ತೀಚೆಗೆ ನಗರ ಬದ್ರಿಯಾಲ್ ಕಾಲೇಜ್ ಸಮೀಪ ಕಂದಕದಲ್ಲಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದು ಕಾರ್ಪೂರೇಟರ್ ಅಬ್ದುಲ್ ಲತೀಫ್ ಅವರು ಮುತುವರ್ಜಿವಹಿಸಿ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಂದರು ಪ್ರದೇಶಕ್ಕೆ ಹೋಗಲು ಇರುವ ರಸ್ತೆಗಳನ್ನು ಆಧುನೀಕರಣಗೊಳಿಸಲಾಗುವುದು ಎಂದರು.

ಸಮಾರಂಭದಲ್ಲಿ ಮೇಯರ್ ಹರಿನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾರ್ಟ್ ಪಿಂಟೊ, ಶಶಿಧರ್ ಹೆಗ್ಡೆ, ಕಾರ್ಪೂರೇಟರ್ ಅಬ್ದುಲ್ ಲತೀಫ್, ಮಾಜಿ ಕಾರ್ಪೂರೇಟರ್ ಸರಳ ಕರ್ಕೇರ, ವಾರ್ಡ್ ಅಧ್ಯಕ್ಷ ಸುಧಾಕರ್ ಶೆಣೈ, ಡಾ.ಎನ್.ಇಸ್ಮಾಯಿಲ್, ಅಹ್ಮದ್ ಬಾವ ಬಜಾಲ್, ಯೂಸೂಫ್ ಉಚ್ಚಿಲ್, ರಾಮ್ ಭಟ್, ಸಿ.ಹಮೀದ್, ಮುಸ್ತಾಫ್, ನಾಸೀರ್, ಸಿರಾಜ್, ಜಾಬಿಸ್, ಆರೀಫ್, ಪ್ರವೀಣ್, ದಯಾನಂದ್, ತೌಶಿಕ್, ಹಮೀರ್, ಜನಾರ್ದನ್, ಅಯೂಬ್, ಫೈಸಲ್, ಜಯರಾಮ ಶೆಟ್ಟಿ, ಗೋಡ್ವಿನ್, ರೋಶನ್, ವಿವೇಕ ಮುಂತಾದವರಿದ್ದರು.