ಮಂಗಳೂರು: ಯುವ ಕಾಂಗ್ರೆಸ್ ಹಾಗು ಸೇವಾದಳ ಇದರ ಅಶ್ರಯದಲ್ಲಿ 49ನೇ ವಾರ್ಡ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿರುವ ಕಪಿತಾನಿಯೊ ಶಾಲಾ ವಠಾರದಲ್ಲಿ ಸುಮಾರು 150 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಬಳಿಕ ಮಾತನಾಡಿದ ಶಾಸಕ ಜೆ. ಆರ್ ಲೋಬೊರವರು, ಜನ ಸಂಪರ್ಕ ಸಭೆ, ವೈದ್ಯಕೀಯ ಶಿಬಿರ, ಪುಸ್ತಕ ವಿತಾರಣ ಕಾರ್ಯಕ್ರಮದ ಜೋತೆಗೆ ಕಾಂಗ್ರೆಸ್ ಪಕ್ಷ ಜನ ಸೇವೆಯ ಉದ್ದೇಶದೊಂದಿಗೆ ನಿರಂತರವಾಗಿ ಇತಂಹ ಹಲವು ಕಾರ್ಯಕ್ರಮ ರೋಪಿಸಿ ಬರುತ್ತಿದ್ದೆವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಪ್ರವಿಣ್ ಚಂದ್ರ ಅಳ್ವ, ಬ್ಲಾಕ್ ಅಧ್ಯಕ್ಷ ಭರತ್, ಪ್ರಭಾಕರ್ ಶ್ರೀಯಾನ್, ರಮಾನಂದ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.