ಮಂಗಳೂರು: ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಉಪಾದ್ಯಕ್ಷ ರಮಾನಂದ್ ಪೂಜಾರಿಯವರ ನೇತೃತ್ವದಲ್ಲಿ ಜೆಪ್ಪು ಅರಕೆರೆಬೈಲು ನಿವಾಸಿ ಯಶೋಧರವರ ಪುತ್ರ ಬಾಲಕ ಗೌತಮ್‍ರವರ ವೈದ್ಯಕೀಯ ಚಿಕಿತ್ಸೆಗೆ 10,000 ರೂಪಾಯಿಯ ಚೆಕ್ಕನ್ನು ಶಾಸಕ ಜೆ. ಆರ್. ಲೋಬೊರವರು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಕವಿತ ವಾಸು, ಕಾಂಗ್ರೆಸ್ ಮುಂಖಡರಾದ ಟಿ.ಕೆ. ಸುಧೀರ್, ಬೆನೆಟ್ ಡಿ’ಮೆಲ್ಲೊ, ಮಹಮದ್ ಹುಸೈನ್, ಗುರು ಪ್ರವಿಣ್, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.