ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಕಿಸ್ಟಾಂಡ್ನ ದಯಾನಂದ್ ಗಟ್ಟಿ ಚಿಕಿತ್ಸೆಗಾಗಿ ರೂಪಾಯಿ 44,000 ಹಾಗೂ ಕಂಕನಾಡಿ ಗರೋಡಿಯ ದಕ್ಷತ್ ಕುಮಾರ್ರವರ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್ನ್ನು ಇತ್ತೀಚಿಗೆ ಹಸ್ತಾಂತಿಸಿದರು. ಈ ಸಂದರ್ಭದಲ್ಲಿ ಕಾರ್ಪೋರೇಟರ್ ಆಶಾ ಡಿ’ಸಿಲ್ವ, ವಾರ್ಡ್ ಅಧ್ಯಕ್ಷರಾದ ಹೇಮಂತ್ ಗರೋಡಿ, ಬೆನೆಟ್ ಡಿ’ಸಿಲ್ವ, ಬೇಬಿರಾಜ್ ಗರೋಡಿ, ಅಶೋಕ್ ಅಂಚನ್, ಟಿ.ಕೆ.ಸುಧೀರ್, ಕೃತೀನ್ ಕುಮಾರ್, ರಮಾನಂದ್ ಪೂಜಾರಿ ಮತ್ತಿತ್ತರು ಉಪಸ್ಥಿತರಿದ್ದರು.