ಮಂಗಳೂರು: ಇತ್ತೀಚಿಗೆ ಫಲ್ಗುಣಿ ನದಿಯಲ್ಲಿ ಮುಳುಗಿ ತೀರಿಕೊಂಡ ಒಂದೇ ಮನೆಯ ಇಬ್ಬರು ಯೌವನಸ್ಥ ಸಹೋದರರ ತಾಯಿಯಾದ ರೋಸ್ಲಿ ಸುಶೀಲ ಇವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯ ಚೆಕ್ ನ್ನ ಸಿಎಸ್ ಐ ಕಾಂತಿ ಸಭೆ ಜೆಪ್ಪು ಇಲ್ಲಿ ಸಭೆಯ ಸಮಕ್ಷಮದಲ್ಲಿ ಶಾಸಕ ಜೆ.ಆರ್.ಲೋಬೊ ಅವರು ವಿತರಿಸಿದರು. ಶಾಸಕರ ವಿಶೇಷ ಅನುಕಂಪದ ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಪರಿಹಾರವನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಭಾ ಪರಿಪಾಲನ ಸಮಿತಿ ಸದಸ್ಯರಾದ ಜಯಕರ್ ಎಸ್. ಸಮರ್ಥ ಮತ್ತು ಸಭಾ ಪಾಲಕರಾದ ರೆವೆ. ಪ್ರಭುರಾಜ್ ಉಪಸ್ಥಿತರಿದ್ದರು.