ಮಂಗಳೂರು: ಆಧಾರ್ ನೋಂದಣೆ ಕಾರ್ಯಕ್ರಮವನ್ನು ಕೆಥೋಲಿಕ್ ಸಭಾ ಮಿಲಾಗ್ರಿಸ್ ಘಟಕ ವತಿಯಿಂದ ಮೇ 2 ಮತ್ತು 3 ರಂದು ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮಿಲಾಗ್ರಿಸ್ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

322 ಮಂದಿ ಆಧಾರ್ ನೋಂದಣಿಯನ್ನು ಮಾಡಿಸಿಕೊಂಡರು. ಕಾರ್ಯಕ್ರಮಕ್ಕೆ ಮಿಲಾಗ್ರಿಸ್ ಚರ್ಚ್ ನ ಗುರುಗಳಾದ ವಂ. ವಲೇರಿಯನ್ ಡಿಸೋಜ ಅವರು ಚಾಲನೆ ನೋಡಿದರು. ಕೆಥೋಲಿಕ್ ಸಭೆಯ ಅಧ್ಯಕ್ಷೆ ಫ್ಲೋರ ಕಾಸ್ತೆಲಿನೋ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕು.ಥೇರೆಸ ಪಿಂಟೊ ಅವರು ಸಂಘಟಿಸಿದರು.