ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಸ್ಥಾನಮಾನವಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸವನ್ನು ಕೂಡ ಪಡೆದಿರುತ್ತಾರೆ. ಸ್ವಂತ ಉದ್ಯೋಗವನ್ನು ಅನೇಕ ಮಹಿಳೆಯರು ನಡೆಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜವು ಎತ್ತರಕ್ಕೆ ಬೆಳೆಯಬಹುದು. ಮಹಿಳೆಯರು ಹೇಗೆ ಒಂದು ಸಂಸಾರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೋ, ಅದೇ ರೀತಿ ಸ್ವಂತ ಉದ್ದಿಮೆಯಲ್ಲಿ ಕೂಡ ತನ್ನ ಕಾರ್ಯಶೀಲತೆಯಿಂದ ಯಶಸ್ವಿಯಾಗಬಹುದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೋರವರು ಇತ್ತೀಚೆಗೆ ಕಸಬಾ ಬಂಗರೆಯ ಖಳ್ ರಿಯ ಸೇವಾ ಸಂಘದ ೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಮಾರು ೯ ಮಂದಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಯ್ಯದ್ ಆಲಿ, ಮಾಜಿ ಕಾರ್ಪೊರೇಟರ್ ಎಂ. ಫರೂಕ್, ಟಿ.ಕೆ. ಸುಧೀರ್, ಅಸ್ಲಾಂ ಬೆಂಗ್ರೆ, ಆಸೀಫ್ ಆಹ್ಮದ್, ಬಿ. ಇಸ್ಮಾಯಿಲ್ ಹಾಜಿ, ರಮಾನಂದ ಪೂಜಾರಿ, ಬಿಲಾಲ್ ಮೊದ್ದೀನ್ ಮೊದಲಾದವರು ಉಪಸ್ಥಿತರಿದ್ದರು.