ಮಂಗಳೂರು: ಜನರು ಮನೆ ಮನೆಗೆ ಹೋಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಕರೆ ನೀಡಿದರು.

ಅವರು 51 ನೇ ಅಳಪೆ ವಾರ್ಡ್ ನ 173 ನೇ ಬೂತ್ ನಲ್ಲಿ ಹೆನ್ರಿ ಡಿಸೋಜರ ನೇತ್ರತ್ವದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಲ್ಲರೂ ಮನೆ ಮನೆಗೆ ಹೋಗಿ ಬಿಜೆಪಿ ಸರ್ಕಾರ ವೈಫಲ್ಯಗಳನ್ನು ಜನರಿಗೆ ಮನರಿಕೆ ಮಾಡಿಕೊಡಬೇಕು. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಅದು ಮಾಡುತ್ತಿರುವ ಕಸರತನ್ನು ಕೂಡಾ ವಿವರಿಸಬೇಕು ಎಂದರು.

ನಾವೆಲ್ಲರೂ ಮನೆ ಮನೆಗೆ ಹೋಗಿ ಜನರಿಗೆ ಕಾಂಗ್ರೆಸ್ ಸರ್ಕಾರ ಹಮ್ಮಿಕೊಂಡಿರುವ ಉತ್ತಮ ಕೆಲಸಗಳನ್ನು ಹೇಳುವ ಮೂಲಕ ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪರವಾಗುಅಂತೆ ಮಾಡಬೇಕು. ಈ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಮನವಿ ಮಾಡಿದರು.