ಇಂದು ದಿನಾಂಕ: 30.04.2018 ರಂದು ಮಣ್ಣಗುಡ್ಡೆ ಪರಿಸರದಲ್ಲಿರುವ ಗುಂಡೂರಾವ್ ಲೇನ್, ಕಾಂತರಾಜ್ ಲೇನ್ ಪ್ರಕಾಶನಗರದಲ್ಲಿರುವ ನೂರಾರು ಮನೆಗಳಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ.ಜೆ.ಆರ್.ಲೋಬೊ ರವರು ಭೇಟಿ ನೀಡಿ ಮತ ಯಾಚಿಸಿದರು. ಕಾಂಗ್ರೇಸ್ ಸರಕಾರದ ಸಾಧನೆಗಳನ್ನು ಮತ್ತು ಮಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ಈಗಾಗಲೇ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಮನದಟ್ಟು ಮಾಡಿದರು. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಲೋಬೊರವರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೋಬೊರವರು ಸರಕಾರ ಹಾಗು ಮಹಾನಗರಪಾಲಿಕೆ ಜೊತೆಗೂಡಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಈ ಪ್ರದೇಶದಲ್ಲಿ ಆಗಿದೆ. ವಿವಿಧ ಮೂಲಗಳಿಂದ ಅನುದಾನ ಸಂಗ್ರಹಿಸಿ ಅಭಿವೃದ್ಧಿಗಾಗಿ ವಿನಿಯೋಗಿಸುವ ಪ್ರಯತ್ನ ಮಾಡಿದ್ದೇನೆ. ಮುಂದೆಯೂ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯವನ್ನು ಮಾಡಲಿದ್ದೇನೆ. ಎಂದರು. ಈ ಸಂದರ್ಭದಲ್ಲಿ ಸಿಟಿ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮಾಜೀ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್, ಗೋಪಾಲಕೃಷ್ಣ ಆಚಾರ್ಯ, ಪದ್ಮನಾಭ ಅಮೀನ್, ಜಿಲ್ಲಾ ಮೀನುಗಾರಿಕಾ ಕಾಂಗ್ರೇಸ್ ಘಟಕದ ಅಧ್ಯಕ್ಷ ದೀಪಕ್ ಶ್ರೀಯಾನ್, ಸಮರ್ಥ್ ಭಟ್, ಶಾಂತಲಾ ಶೆಟ್ಟಿ, ಸುರೇಂದ್ರ ಶೈಣೈ ಮುಂತಾದವರು ಉಪಸ್ಥಿತರಿದ್ದರು.

ಮಣ್ಣಗುಡ್ಡೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮನೆ ಮನೆ ಪ್ರಚಾರ

ಮಣ್ಣಗುಡ್ಡೆ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರವರಿಂದ ಮನೆ ಮನೆ ಪ್ರಚಾರ