ಇಂದು ತಾರೀಕು 14.04.2019 ರಂದು ಭಾನುವಾರ ಮಂಗಳೂರು ನಗರದಲ್ಲಿ ಮಿಥುನ್ ರೈ ಯವರು ನಗರದ ವಿವಿಧ ಪ್ರಾರ್ಥನಾ ಮಂದಿರದಲ್ಲಿ ತೆರಳಿ ದೇವರ ದರ್ಶನ ಪಡೆದು, ಬಂದರು ಮೀನು ವ್ಯಾಪಾರಸ್ಥರ ಕೇಂದ್ರ ಸ್ಥಾನ ಧಕ್ಕೆಯಲ್ಲಿ ಮೀನು ಮಾರಾಟಗಾರರಲ್ಲಿ ಮತಯಾಚನೆಗೈದರು. ತದ ನಂತರ ಜಪ್ಪು ಮಾರ್ಕೆಟ್ ಪರಿಸರ, ಕಂಕನಾಡಿ, ಸೂಟರ್ ಪೇಟೆ, ಬಜಾಲ್, ಕಣ್ಣೂರು, ಜಪ್ಪಿನಮೊಗರು, ಮೋರ್ಗನ್ ಗೇಟ್, ಅತ್ತಾವರ ಮುಂತಾದ ಕಡೆಗಳಲ್ಲಿ ಸಾರ್ವಜನಿಕರಲ್ಲಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಜನರು ಬದಲಾವಣೆಗಾಗಿ ನಿರೀಕ್ಷಿಸುತ್ತಿದ್ದಾರೆ. ಕಳೆದ 10 ವರ್ಷಗಳ ಅವಧಿಯಲ್ಲಿ ಈಗಿನ ಬಿಜೆಪಿ ಸಂಸದರು ಯಾವುದೇ ಹೇಳುವಂತಹ ಕೆಲಸ ಕಾರ್ಯಗಳು ಮಾಡಿಲ್ಲ. ಜನರು ಬಹಳಷ್ಟು ಬೇಸತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಯುವಕ/ಯುವತಿಯರಿಗೆ ಅವರವರ ವಿದ್ಯಾರ್ಹತೆ ತಕ್ಕಂತೆ ಉದ್ಯೋಗ ಅವಕಾಶಗಳನ್ನು ಲಭಿಸುವಂತೆ ಕ್ರಮಕೈಗೊಳ್ಳಲು, ಜಿಲ್ಲೆಯ ಕೋಮು ಸಾಮರಸ್ಯ ಕಾಪಾಡಲು ಹಾಗೂ ಜಿಲ್ಲೆಯ ಅಭಿವೃದ್ದಿ ಕಾರ್ಯಗಳು ನೆರವೇರಿಸಲು ನಾನು ಸದಾ ಸಿದ್ಧ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಿಥುನ್ ರೈಯವರೊಂದಿಗೆ ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ.ಸೋಜ, ಮಾಜಿ ಶಾಸಕ ಶ್ರೀ ಜೆ.ಆರ್. ಲೋಬೊ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ, ಮಾಜಿ ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅಬ್ದುಲ್ ಲತೀಪ್, ರತಿಕಲಾ, ಶೈಲಜಾ, ಕವಿತಾ ವಾಸು, ನವೀನ ಡಿ.ಸೋಜ, ಆಶಾ ಡಿ.ಸಿಲ್ವ ಹಾಗೂ ಕಾಂಗ್ರೆಸ್ ಪ್ರಮುಖರಾದ ಪ್ರಭಾಕರ ಶ್ರೀಯಾನ್, ಟಿ.ಕೆ. ಸುಧೀರ್, ಸದಾಶಿವ ಅಮೀನ್, ದುರ್ಗಾಪ್ರಸಾದ್, ಮೆರಿಲ್ ರೇಗೋ, ರಮಾನಂದ ಪೂಜಾರಿ, ಆಶಿತ್ ಪಿರೇರಾ, ಕರುಣಾಕರ ಶೆಟ್ಟಿ, ಮನುರಾಜ್ ಮೊದಲಾದವರು ಉಪಸ್ಥಿತರಿದ್ದರು.