ನೀರಿನ ಟಾಸ್ಕ್ ಫೋರ್ಸ್ ಸಭೆ

ಮಂಗಳೂರು: ಮಂಗಳೂರಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ವಿಚಾರಗಳ ಕುರಿತು ಶಾಸಕ ಜೆ.ಆರ್.ಲೋಬೊ ಅವರು ನಿನ್ನೆ ತಮ್ಮ ಕಚೇರಿಯಲ್ಲಿ ನೀರಿನ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು.

ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಗಳು ಯುದ್ದೋಪಾದಿಯಲ್ಲಿ ಯಾವೆಲ್ಲಾ ಪ್ರದೇಶಗಳಲ್ಲಿ ನೀರಿನ ಬರ ಇದೆ ಎಂಬುದನ್ನು ಅಧ್ಯಯನ ನಡೆಸಿ ಮಂಗಳವಾರವೇ ತಮಗೆ ಅಧ್ಯಯನಶೀಲ ವರದಿ ಕೊಡುವಂತೆ ತಾಕೀತು ಮಾಡಿದರು. ನಗರದಲ್ಲಿ ಯಾವೆಲ್ಲಾ ಪ್ರದೇಶಗಳಿಗೆ ನೀರಿನ ಬರ ಉಂಟಾದರೆ ತಕ್ಷಣ ಸ್ಫಂಧಿಸುವ ಕುರಿತು ವರದಿ ತಯಾರಿಸಬೇಕು. ನೀರಿನ ಕೊರತೆಯಾಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ವರದಿ ನೀಡುವಂತೆ ಹೇಳಿದ ಅವರು ತುಂಬೆಯಿಂದ ನೀರು ಬರದೆ ಇದ್ದರೇ ಬದಲಿ ಕ್ರಮ ಹೇಗೆ ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಅಧ್ಯನ ನಡೆಸಿ ಪರಿಹಾರ ಕ್ರಮಗಳ ಕುರಿತು ತಿಳಿದುಕೊಳ್ಳುವಂತೆ ಸೂಚನೆ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು 218 ಕೊಳವೆ ಬಾವಿಗಳಿವೆ. ಈ ಪೈಕಿ 154 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದವು ಕಟ್ಟಿವೆ. ಇವಿಗಳನ್ನು ಸರಿಪಡಿಸಬೇಕಾದರೆ ತಲಾ ಒಂದು ಲಕ್ಷ ರೂಪಾಯಿ ಬೇಕಾಗುತ್ತದೆ ಎಂದು ಎಕ್ಸಿಕುಟಿವ್ ಇಂಜಿನಿಯರ್ ಲಿಂಗೇಗೌಡ ತಿಳಿಸಿದಾಗ ಶಾಸಕ ಜೆ.ಆರ್.ಲೋಬೊ ಲಕ್ಷಣ ಎಲ್ಲಾ ಕೊಳವೆ ಬಾವಿಗಳನ್ನು ಇಂಜಿನಿಯರ್ ಗಳು ಅಧ್ಯಯನ ಮಾಡಿ ಮಂಗಳವಾರ ತಮಗೆ ವರದಿ ಕೊಡಬೇಕು. ಎಷ್ಟು ಕೊಳಬೆ ಬಾವಿಗಳು ಸಮರ್ಪಕವಾಗಿವೆ, ಎಷ್ಟು ಕೊಳವೆ ಬಾವಿಗಳು ಡೆಡ್ ಆಗಿವೆ, ಅವುಗಳನ್ನು ದುರಸ್ತಿಪಡಿಸಲು ಎಷ್ಟು ಹಣಬೇಕಾಗುತ್ತದೆ. ಸರಿಪಡಿಸಿದರೆ ಎಷ್ಟರಮಟ್ಟಿಗೆ ಪೀಸಿಬಲ್ ಆಗಲಿವೆ ಎಂಬುದನ್ನು ತಿಳಿಸಬೇಕು. ವಾಲ್ ಮ್ಯಾನ್ ಗಳ ವರದಿ ತೆಗೆದುಕೊಂಡು ನನಗೆ ಹೇಳಬೇಡಿ. ನೀವೇ ಖುದ್ದು ಹೋಗಿ ತಿಳಿಸಬೇಕು ಎಂದು ತಾಕೀತು ಮಾಡಿದರು.

ಮಂಗಳೂರಲ್ಲಿ ತೆರೆದ ಬಾವಿಗಳು ಎಷ್ಟಿವೆ?, ಅವುಗಳ ಸಮಗ್ರ ವರದಿ ಕೊಡಬೇಕು. ಕಳೆದ ವರ್ಷವೂ ತೆರೆದ ಬಾವಿಗಳನ್ನು ಸರಿಪಡಿಸಿ ಹಣ ಖರ್ಚು ಮಾಡಿದ್ದೇವೆ. ಅವುಗಳ ಸ್ಥಿತಿಯ ಬಗ್ಗೆಯೂ ತಿಳಿಸಬೇಕು. ಅಗತ್ಯವಾದರೆ ತೆರೆದ ಬಾವಿಗಳನ್ನೂ ಬಳಸಿಕೊಳ್ಳಲು ಸಿದ್ದವಾಗಬೇಕು ಎಂದು ತಿಳಿಸಿದರು.

ತುಂಬೆಯಿಂದ ನೀರು ಬರದಿದ್ದರೆ ನಾವು ಜನರಿಗೆ ತೊಂದರೆಯಾಗದಂತೆ ನೀರು ಸರಬರಾಜು ಮಾಡಲು ಪರಿಹಾರಗಳನ್ನು ಸಿದ್ದಪಡಿಸುವಂತೆಯೂ ಅವರು ಸೂಚಿಸಿದರು. ಮಾರ್ಚ್ 14 ರಂದು ಬೆಳಿಗ್ಗೆ ಸಭೆ ನಡೆಸುತ್ತೇನೆ. ಈ ಸಭೆಗೆ ಜೂನಿಯರ್ ಇಂಜಿನಿಯರ್ ಗಳು ಈಗ ತಿಳಿಸಿದ ಎಲ್ಲಾ ಮಾಹಿತಿಗಳನ್ನು ತರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಈ ಎಲ್ಲಾ ಕ್ರಮಗಳು ಬರಬಹುದಾದ ನೀರಿನ ಸಮಸ್ಯೆ ಎದುರಿಸಲು ಈಗಿನಿಂದಲೇ ಸಿದ್ದರಾಗಬೇಕು. ಹಿಂದಿನ ವರ್ಷದಂತೆ ತಯಾರಿಗಳಿಲ್ಲದೇ ನೀರು ಕೊಡಲು ಹೆಣಗಬಾರದು ಎಂದು ಶಾಸಕರು ತಿಳಿಸಿದರು. ಕ್ರೆಡೈಲ್ ಸಂಸ್ಥೆಯವರು ತುಂಬೆಯ ನೀರನ್ನು ಬಳಸದೆ ನಿರ್ಮಾಣ ಕಾಮಗಾರಿಗಳಿಗೆ ಸ್ವತಂತ್ರವಾಗಿ ನೀರಿನ ಬಳಕೆ ಮಾಡಿಕೊಳ್ಳಬೇಕು. ಜನರಿಗೆ ಕುಡಿಯುವ ನೀರು ಕೊಡುವುದು ಮುಖ್ಯ. ಈ ಬಗ್ಗೆ ಗಮನ ಹರಿಸುವಂತೆ ಲೋಬೊ ಸೂಚಿಸಿದರು.

ನೀರು ಸಬರಾಜು ಯಾವೆಲ್ಲಾ ಪ್ರದೇಶಗಳಿಗೆ ಆಗುತ್ತಿಲ್ಲ, ಕಾರಣಗಳೇನು ಎಂಬುದನ್ನು ತಿಳಿದು ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ತಮಗೂ ಮೂರು ದಿನಗಳ ಒಳಗೆ ವರದಿಕೊಡಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕಮಿಷನರ್ ನಜೀರ್, ಎಕ್ಸಿಕುಟಿವ್ ಇಂಜಿನಿಯರ್ ಲಿಂಗೇಗೌಡ ಸೇರಿದಂತೆ ಮಹಾನಗರ ಪಾಲಿಕೆಯ ಎಲ್ಲಾ ಜೂನಿಯರ್ ಇಂಜಿನಿಯರ್ ಗಳು ಉಪಸ್ಥಿತರಿದ್ದರು.