Home » Website » News from jrlobo's Office » ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಲೋಬೊರವರ ಚುನಾವಣಾ ಮನೆ ಮನೆಗೆ ಭೇಟಿ ಆರಂಭ
ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಲೋಬೊರವರ ಚುನಾವಣಾ ಮನೆ ಮನೆಗೆ ಭೇಟಿ ಆರಂಭ
Image from post regarding ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಲೋಬೊರವರ ಚುನಾವಣಾ ಮನೆ ಮನೆಗೆ ಭೇಟಿ ಆರಂಭ

ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಲೋಬೊರವರ ಚುನಾವಣಾ ಮನೆ ಮನೆಗೆ ಭೇಟಿ ಆರಂಭ

ಇಂದು ತಾ 28.04.2018 ರಂದು ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾದ ಶ್ರೀ.ಜೆ.ಆರ್ ಲೋಬೊರವರು ಭೇಟಿ ನೀಡಿ, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯ ಪುಸ್ತಕವನ್ನು ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಅವರು ಅದೇ ಪರಿಸರದ ಮಂಗಳಾನಗರ, ಕಾಂತೀ ಚರ್ಚ್ನ ಹಿಂದುಗಡೆಯಿರುವ ಅನೇಕ ಮನೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ನೇತೃತ್ವದಲ್ಲಿ ಕಾಂಗ್ರೆಸ್ ಅನೇಕ ಜನಮೆಚ್ಚುಗೆಯ ಯೋಜನೆಗಳನ್ನು ಜಾರಿಗೆ ತಂದಿದೆ. ಬಡವರ, ಹಿಂದುಳಿದ ವರ್ಗಗಳ, ಪರಿಶಿಷ್ಠ ವರ್ಗಗಳ, ಅಲ್ಪಸಂಖ್ಯಾತರ ಪರವಾಗಿ ವಿಶೇಷವಾದ ಕಾಳಜಿಯನ್ನು ವಹಿಸಿದೆ. ಅಲ್ಲದೇ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸರಕಾರದ ವತಿಯಿಂದ ಕೋಟ್ಯಾಂತರ ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ನಡೆದಿದೆ. ಮನೆ ಮನೆಗೆ ಭೇಟಿ ನೀಡಿದಾಗ ಜನರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಖಂಡಿತವಾಗಿಯೂ ಈ ಬಾರಿ ಕೂಡ ಗೆಲುವು ನಮ್ಮದಾಗಿದೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ. ಸದಾಶಿವ ಅಮಿನ್, ಸುರೇಶ್ ಶೆಟ್ಟಿ, ರಮಾನಂದ ಪೂಜಾರಿ. ನಮಿತಾ ರಾವ್. ದಿನೇಶ್ ರಾವ್, ಗುರುಪ್ರವೀಣ್, ಲಾರೆನ್ಸ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಶಾಸಕ ಲೋಬೊರವರ ಚುನಾವಣಾ ಮನೆ ಮನೆಗೆ ಭೇಟಿ ಆರಂಭ