ಭಾರತ ಸೇವಾದಳ ಸ್ಥಾಪಕ ದಿ| ಡಾ. ನಾರಾಯಣ ಸುಬ್ಬರಾವ್ ಹರ್ಡೀಕರ್‍ರವರ 127ನೇ ಜನ್ಮದಿನಾಚರಣೆಯನ್ನು ಇಂದು ಬಾವುಟಗುಡ್ಡೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು. ಭಾರತ ಸೇವಾದಳ ಜಿಲ್ಲಾಧ್ಯಕ್ಷ ಶ್ರೀ ಬಶೀರ್ ಬೈಕಂಪಾಡಿ, ಕಾರ್ಯದರ್ಶಿ ಟಿ.ಕೆ. ಸುಧೀರ್, ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಕಾರ್ಯದರ್ಶಿ ಉದಯ ಕುಂದರ್, ಮುಖ್ಯ ಸಂಘಟಕ ಟಿ.ಎಂ. ಮಂಜೇಗೌಡ, ಸುರೇಶ್ ಶೆಟ್ಟಿ, ಪ್ರೇಮ್ ಚಂದ್ ಮೊದಲಾದವರು ಉಪಸ್ಥಿತರಿದ್ದರು.