ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿಕೊಂಡು ನಾವೂ ಕೂಡಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಅವರು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 162 ನೇ ಜನ್ಮ ದಿವಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಅಸ್ಪಶ್ರ್ಯುತೆಯನ್ನು ನಿವಾರಣೆ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಎಲ್ಲ ಸಮುದಾಯವನ್ನು ಒಂದೆಡೆ ಸೇರಿಸಿ ಎಲ್ಲರೂ ಸಮಾನತೆಯಿಂದ ಬದುಕುವಂತೆ ಮಾಡಿದ ಮಾನವತಾವಾದಿ. ಮೇಲು, ಕೀಳು ಎಂಬುದಿಲ್ಲವೆಂದು ಎಲ್ಲರೂ ಒಗ್ಗೂಡಿ ಜೀವಿಸುವಂತೆ ಮಾಡಿದದವರು. ಒಂದೇ ಜಾತಿ, ಒಂದೇ ಧರ್ಮ ,ಒಬ್ಬರೇ ದೇವರು ಕೂಡಾ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ನುಡಿದರು.

ಕರ್ನಾಟಕ ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ಮೂಲಕವೇ ಆಚರಿಸುವ ದಿಟ್ಟತನ ತೋರಿಸಿದ್ದಕ್ಕಾಗಿ ಶಾಸಕ ಜೆ.ಆರ್.ಲೋಬೊ ಅವರು ಅಭಿನಂದನೆ ಸಲ್ಲಿಸಿದರು.

ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹರಿನಾಥ್ ಅವರು ದ್ವೀಪ ಪ್ರಜ್ವಲನ ಮಾಡಿದರು. ಸಮಾರಂಭದಲ್ಲಿ ರಾಷ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಜಯ ಸಿ.ಸುವರ್ಣ, ವಿಜಯವಾಹಿನಿ ಎಂಟರ್ ಪ್ರೈಸಸ್ಸ್ ಮಾಲೀಕರಾದ ಮೋಹನ್ ಅಮೀನ್ , ಅಧ್ಯಕ್ಷರು ಶಿವಗಿರಿ ವಿವಿದೋದ್ದೇಶ ಸಹಕಾರಿ ಸಂಘದ ದಿನೇಶ್ ರಾಜ್ ಕೆ, ಪಿ.ಎ.ಕಾಲೇಜ್ ಆಫ್ ಇಂಜಿನಿಯರ್ ಫೆÇ್ರಫೆಸರ್ ಡಾ.ಶರ್ಮೀಳಾ ಬಿ.ಪೂಜಾರಿ, ಮಾಜಿ ಅಧ್ಯಕ್ಷರು ಯುವವಾಹಿನಿ ಕೇಂದ್ರ ಸಮಿತಿಯ ಪರಮೇಶ್ವರ ಪೂಜಾರಿ, ಚಿತ್ರ ನಟರಾದ ಭೋಜರಾಜ್ ವಾಮಂಜೂರ್ ಮತ್ತು ಅರವಿಂದ ಬೋಳಾರ್ ಉಪಸ್ಥಿತರಿದ್ದರು.

ಅಧ್ಯಕ್ಷ ಭೋಜ ಕೆ ಸ್ವಾಗತಿಸಿದರು. ಕಾರ್ಯದರ್ಶಿ ಜಯಲಕ್ಷ್ಮಿ ಬಿ.ಆರ್.ಪ್ರಾಸ್ತಾವಿಕ ಭಾಷಣ ಮಾಡಿದರು. ಜಗದೀಶ್ ಗೋಪುರ ಗುಂಡಿ ವಂದಿಸಿದರು.