Home » Website » News from jrlobo's Office » ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ
ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ
Image from post regarding ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ಬೋಳೂರು ಸುಲ್ತಾನ್ ಬತ್ತೇರಿ – ಕಂಡತ್ತಪಳ್ಳಿ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ನಗರದ ಬೋಳೂರು ಸುಲ್ತಾನ್ ಬತ್ತೇರಿಯಿಂದ ಬಂದರ್ ಕಂಡತ್ತಪಳ್ಳಿವರೆಗಿನ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ದೃಷ್ಠಿಯಲ್ಲಿ ತಾ. 18.03.2018 ರಂದು ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು. ಗುದ್ದಲಿಪೂಜೆಯನ್ನು ನೆರವೇರಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನಸಭಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊ ರವರು, ನಗರದ ಸೌಂದರ್ಯಕರಣಗೊಳಿಸಲು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಈಗಾಗಲೇ ಮಂಗಳೂರಿನಾದ್ಯಂತ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದ ಸರಕಾರ ಕಳೆದ ನಾಲ್ಕುವರೆ ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ನಗರದ ಅಭಿವೃದ್ಧಿಗೆ ಹಾಕಲಾಗಿದೆ. ನದಿ ತೀರದಲ್ಲಿರುವ ಈ ಒಂದು ರಸ್ತೆಯನ್ನು ಅಭಿವೃದ್ಧಿಪಡಿಸಲು ರಾಜ್ಯದ ಲೋಕೊಪಯೋಗಿ ಇಲಾಖೆಯಿಂದ ರೂ. 3.00 ಕೋಟಿ ಮಂಜುರಾತಿಯಾಗಿದೆ. ಸುಮಾರು 1.50 ಕಿ.ಮೀ ಉದ್ದದ ರಸ್ತೆಯನ್ನು ಈ ಅನುದಾನದಿಂದ ಕಾಂಕ್ರಿಟೀಕರಣಗೊಳಿಸಲಾಗುವುದು. ಇದಕ್ಕೆ ಪೂರಕವಾಗಿ ಸುಲ್ತಾನ್ ಬತ್ತೇರಿಯಿಂದ ರಸ್ತೆಯನ್ನು ರಾಜ್ಯದ ಪ್ರವಾಸೋಧ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಲು ನಿರ್ಧರಿಸಿ ಈಗಾಗಲೇ ರೂ.1.25 ಕೋಟಿ ಅನುದಾನ ದೊರೆತಿದೆ. ಸುಮಾರು 540 ಕಿ.ಮೀ ಉದ್ದಕ್ಕೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದರೊಂದಿಗೆ ಸುಲ್ತಾನ್ ಬತ್ತೇರಿ ಪ್ರದೇಶವು ಜನರಿಂದ ಇನ್ನಷ್ಟು ಆಕರ್ಷಣೆಯಾಗಲಿದೆ. ಅದಲ್ಲದೇ ಜನನಿಬಿಡ ಪ್ರದೇಶದಿಂದ ಬಂದರ್ ಕಂಡತ್ತಪಳ್ಳಿ ರಸ್ತೆಯ ಅಭಿವೃದ್ಧಿಯಿಂದ ಅಲ್ಲಿನ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜೀ ವಿಧಾನಸಭಾ ಮುಖ್ಯ ಸಚೇತಕ ಶ್ರೀ.ಕೆ.ಎಸ್ ಮೊಹಮ್ಮದ್ ಮಸೂದ್, ಬೊಕ್ಕಪಟ್ಣ ಚರ್ಚ್ ನ ಧರ್ಮಗುರು ಫಾದರ್ ವಿಲ್ಫ್ರೆಡ್ ಅಮ್ಮಣ್ಣ, ಮಹಾನಗರ ಪಾಲಿಕೆಯ ಲೆಕ್ಕಪತ್ರ ಸಮಿತಿಯ ಅಧ್ಯಕ್ಷೆ ಲತಾ ಸಾಲ್ಯಾನ್, ಕಾರ್ಪೋರೇಟರ್ ಲತೀಫ್ ಕಂದಕ್, ಮಾಜಿ ಕಾರ್ಪೋರೇಟರ್ ಕಮಲಾಕ್ಷ ಸಾಲ್ಯಾನ್ , ದ.ಕ.ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ದೀಪಕ್ ಶ್ರೀಯಾನ್, ಕಾಂಗ್ರೆಸ್ ಮುಖಂಡರುಗಳಾದ ಸತೀಶ್ ಪೆಂಗಲ್, ಶಂಶುದ್ದೀನ್, ಮೋಹನ್ ಶೆಟ್ಟಿ, ಜಯರಾಜ್ ಕೋಟ್ಯಾನ್, ಡಿ.ಎಮ್ ಮುಸ್ತಾಫ, ಬಿ.ಪಿ.ಆಚಾರ್, ಸಲೀಂ ಕುದ್ರೋಳಿ, ಅನ್ವರ್ ರೀಕೊ, ಇಮ್ರಾನ್, ಯೂಸುಫ್ ಉಚ್ಚಿಲ, ಲೋಕೊಪಯೋಗಿ ಇಲಾಖೆ ಇಂಜಿನಿಯರ್ ಗಳಾದ ರವಿಕುಮಾರ್, ದಾಸ್ ಪ್ರಕಾಶ್ ಮೊದಲಾದವರು ಉಪಸ್ಥತರಿದ್ದರು.