ಮಂಗಳೂರು: ಬಡವರು ನಿರಾತಂಕವಾಗಿ ಸ್ವಂತ ಉದ್ಯೋಗ ಹೊಂದುವತಾಗಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.

ಅವರು ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ 36 ರಿಕ್ಷಾ ಅನುಮತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡುತ್ತಾ ಸಾಕಷ್ಟು ಒತ್ತಡ ಹಾಗೂ ಒತ್ತಾಯದ ಮೂಲಕ ಈ ರಿಕ್ಷಾಗಳನ್ನು ಕೊಡಿಸುವುದು ಸಾಧ್ಯವಾಯಿತು. ಇದರ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದರು.

ಸರ್ಕಾರ ಕೊಡಮಾಡಿದ ಈ ಅನುಮತಿ ಪತ್ರವನ್ನು ಪಡೆದಿರುವ ರಿಕ್ಷಾ ಚಾಲಕರು ಪರಿಶ್ರಮದ ಮೂಲಕ ಕೆಲಸ ಮಾಡಿ ಬಡವರು ಕೂಡಾ ಯಾವ ಮುಲಾಜಿಲ್ಲದೆ ಬದುಕಲು ಸಾಧ್ಯವೆಂದು ತೋರಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ಅಧಿಕಾರಿ ರಾಮಮೂರ್ತಿ, ಶೇಖರ ಸುವರ್ಣ, ಭರತೇಶ್ ಅಮೀನ್, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ಪುಷ್ಪರಾಜ ಪೂಜಾರಿ, ಮಹಾನಗರ ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್ ಮುಂತಾದವರು ಉಪಸ್ಥಿತರಿದ್ದರು.