ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರು ಇಂದು 08.04.2019 ರಂದು ಬಜಾಲ್ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಎಂ. ಮಿಥುನ್ ರೈ ಅವರ ಪರವಾಗಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಮನಪಾ ಸದಸ್ಯೆ ಸುಮಯ್ಯ ಅಶ್ರಫ್, ವಾರ್ಡು ಅಧ್ಯಕ್ಷ ಆನಂದ ರಾವ್, ಎ.ಪಿ.ಎಂ. ಸಿ. ಸದಸ್ಯ ಭರತೇಶ್ ಅಮೀನ್, ಅಶ್ರಫ್ ಬಜಾಲ್, ಅಬೂಬಕ್ಕರ್, ಅಹ್ಮದ್ ಬಾವ, ಪ್ರದೀಪ್ ಜಲ್ಲಿಗುಡ್ಡೆ, ಜ್ಯೋತಿ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.