ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ, 53ನೇ ಬಜಾಲ್ ವಾರ್ಡು ಕಾಂಗ್ರೆಸ್ ಸಮಿತಿ ಮತ್ತು ಕೆ.ಎಂ.ಸಿ. ಆಸ್ಪತ್ರೆ, ರೆಡ್‍ಕ್ರಾಸ್ ಬ್ಲಡ್ ಬ್ಯಾಂಕ್ ಹಾಗೂ ಎ.ಜೆ.ಆಸ್ಪತ್ರೆಯ ಸಹಯೋಗದೊಂದಿಗೆ ಶಾಸಕರಾದ ಜೆ.ಆರ್. ಲೋಬೊ ರವರ ನೇತೃತ್ವದಲ್ಲಿ ಬಜಾಲ್ ಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಮಹಿಳೆಯರಿಗಾಗಿ ಥೈರಾಯಿಡ್ ತಪಾಸಣಾ ಶಿಬಿರ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಲೇರಿಯಾ ತಪಾಸಣೆ ನಡೆಯಿತು. ಈ ಶಿಬಿರದಲ್ಲಿ ಕಣ್ಣು, ಕಿವಿ, ಗಂಟಲು, ಮೂಳೆ, ಸ್ತೀರೋಗ, ಚರ್ಮ ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಪರೀಕ್ಷೆಯನ್ನು ನಡೆಸಲಾಯಿತು. ಹಾಗೂ ಅಗತ್ಯವುಳ್ಳವರಿಗೆ ಓದುವ ಕನ್ನಡಕವನ್ನು ಉಚಿತವಾಗಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ, ಬ್ಲಾಕ್ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಪ್ರಭಾಕರ ಶ್ರೀಯಾನ್, ಮನಪಾ ಸದಸ್ಯರಾದ ಸುಮಯ್ಯ ಅಶ್ರಫ್, ವಾರ್ಡ್ ಅಧ್ಯಕ್ಷರಾದ ಭರತೇಶ್ ಅಮೀನ್, ಅಹ್ಮದ್ ಬಾವ, ಪ್ರಕಾಶ್ ಪೈ, ಅಬೂಬಕ್ಕರ್, ಜ್ಯೋತಿ ಅಶೋಕ್, ರಫೀಕ್ ಕಣ್ಣೂರು, ಹಮೀದ್ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 250 ಕ್ಕೂ ಮಿಕ್ಕಿ ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದರು.