Home » Website » News from jrlobo's Office » ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ
JRLobo
Photography of JRLobo in office

ಪೊಲೀಸರಿಗೆ ಮೂರು ಶಿಫ್ಟ್ ಮಾಡುವಂತೆ ಶಾಸಕ ಜೆ.ಆರ್.ಲೋಬೊ ಸರ್ಕಾರಕ್ಕೆ ಒತ್ತಾಯ

ಮಂಗಳೂರು :ಪೊಲೀಸರಿಗೆ ಈಗ ಕೇವಲ ಎರಡು ಶಿಫ್ಟ್ ಮಾತ್ರ ಇದ್ದು ಇದನ್ನು ಮೂರು ಶಿಫ್ಟ್ ಮಾಡುವಂತೆ ತಾವು ಸರ್ಕಾರದ ಮೇಲೆ ಒತ್ತಾಯ ಮಾಡುವುದಾಗಿಯೂ ಶಾಸಕ ಜೆ.ಆರ್.ಲೋಬೊ ಭರವಸೆ ನೀಡಿದರು.

ಅವರು ಇಂದು ಕಂಕನಾಡಿ ಠಾಣೆಗೆ ಭೇಟಿ ನೀಡಿದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂಧಿಗಳ ಕೊರತೆ ಇದೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಸಿಬ್ಬಂಧಿಗಳನ್ನು ಹೆಚ್ಚಿಸಬೇಕು. ಶಾಸಕನಾಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಿಬ್ಬಂಧಿ ಪ್ರಮಾಣ ಹೆಚ್ಚಿಸುವಂತೆ ಒತ್ತಾಯ ತರುವುದಾಗಿ ಹೇಳಿದರು.

ಕಂಕನಾಡಿ ನಗರ ಪೊಲೀಸ್ ಠಾಣೆ ಸ್ಥಾಪನೆಯಾದ ನಂತರ ಬಜಾಲ್, ಜಪ್ಪಿನಮೊಗರು, ಶಕ್ತಿನಗರ ಮುಂತಾದ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು.

ಈಗ ಕಂಪ್ಯೂರ್ ಯುಗ. ಈಗ ಇಲ್ಲಿಗೆ 4 ಕಂಪ್ಯೂಟರ್ ಕೊಟ್ಟಿದ್ದಾರೆ. ಇಲ್ಲಿಗೆ ಇನ್ನೂ 10 ಕಂಪ್ಯೂಟರ್ ಕೊಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ತಿಳಿಸಿದ ಶಾಸಕ ಜೆ.ಆರ್.ಲೋಬೊ ಪೆÇಲೀಸ್ ಸಿಬ್ಬಂಧಿಗೆ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಸುಧಾರಣೆ ತರುವಂತೆ ಸರ್ಕಾರವನ್ನು ಕೇಳುವುದಾಗಿ ನುಡಿದರು.

ದೂರದ ಊರುಗಳಿಗೆ ಹೋಗಲು ಸಧ್ಯ ಕೆ ಎಸ್ ಆರ್.ಟಿ ಸಿ ಯಲ್ಲಿ ಸಾಮಾನ್ಯ ಬಸ್ಸುಗಳಲ್ಲಿ ಸಂಚರಿಸಲು ಮಾತ್ರ ಅವಕಾಶ. ಇದನ್ನು ಲಗ್ಸುರಿ ಅಥವಾ ಸೆಮಿ ಲಕ್ಸುರಿ ಬಸ್ಸುಗಳಲ್ಲೂ ಅವಕಾಶ ಕೊಡುವಂತೆ ತಾವು ಸರ್ಕಾರದ ಜೊತೆ ಮಾತನಾಡುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದರು.