ಮಂಗಳೂರು,ಅ.24: ಜೆಪ್ಪು ಮಾರ್ಕೆಟ್ ಬಳಿ ಇರುವ ಬಗಿನಿ ಸಮಾಜದಲ್ಲಿ ಆಶ್ರಯಿತರಾಗಿರುವ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಸಿಹಿತಿಂಡಿ, ಹಣ್ಣುಹಂಪಲು, ಮತ್ತು ಪಟಾಕಿಗಳನ್ನು ಹಂಚುವುದರ ಮೂಲಕ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ತಮ್ಮ ಪಕ್ಷದ ಕಾರ್ಯಕರ್ತರೊಡನೆ ಸೇರಿ ಆಚರಿಸಿದರು. ನಂತರ ಮಾತನಾಡಿದ ಅವರು ಈ ಮಕ್ಕಳೊಂದಿಗೆ ಆಚರಿಸಲು ಮುಖ್ಯ ಉದ್ದೇಶವೆಂದರೆ ಎಲ್ಲಾ ಕಡೆ ಸಿಹಿ ಹಂಚುವಾಗ ಪಟಾಕಿ ಸಿಡಿಸುವಾಗ ನಮಗೆ ಇಂತಹ ಅವಕಾಶ ಇಲ್ಲ ಎನ್ನುವ ಬಾವನೆ ಈ ಮಕ್ಕಳಲ್ಲಿ ಬರಬಾರದು ಈ ಮಕ್ಕಳು ಕೂಡ ಎಲ್ಲರಂತೆ ಸಂತೊಷದಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ನಮ್ಮ ಕಾಂಗ್ರೇಸ್ ಪಕ್ಷದ ಕಡೆಯಿಂದ ಒಂದು ಚಿಕ್ಕದಾದ ಒಂದು ಪ್ರಯತ್ನ ಎಂದರು, ಹಾಗೆಯೇ ಎರಡು ಬಡ ಕುಟುಂಬಗಳಿಗೆ ಅಕ್ಕಿಯನ್ನೂ ಅವರ ಮನೆಗೆ ಬೇಟಿ ನೀಡಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಉಪಮೇಯರ್ ಶ್ರೀಮತಿ ಕವಿತಾ ವಾಸು, ಕಾಫೆರ್Çರೇಟರ್‍ಗಳಾದ ರತಿಕಲಾ, ಶೈಲಜಾ, ಹಾಗೂ ಪಕ್ಷದ ಪ್ರಮುಖರಾದ ಮೂಹಮ್ಮದ್ ಬದ್ರೂದ್ದೀನ್, ಸುರೇಶ್ ಶೆಟ್ಟಿ, ವಿಶ್ವಾಸ್ ದಾಸ್, ಟಿ.ಕೆ ಸುದೀರ್, ಸದಾಶಿವ ಅಮೀನ್, ರಮಾನಂದ ಪೂಜಾರಿ, ತೆಜಸ್ವಿರಾಜ್, ನಮಿತಾ ರಾವ್, ಡೆನ್ನಿಸ್ ಡಿ’ಸಿಲ್ವ, ದುರ್ಗಾ ಪ್ರಸಾದ್, ಬೆನೆಟ್ ಡಿ’ಮೆಲ್ಲೊ, ಸುನಿಲ್ ಶೆಟ್ಟಿ, ಮೊಹಮ್ಮದ್ ಹುಸೇನ್,ಸಂದೀಪ್ ಬೋಳಾರ್, ಶಫೀ ಅಹಮ್ಮದ್, ಉದಯ್ ಬೋಳಾರ್ ಮುಂತಾದವರು ಉಪಸ್ಥಿತರಿದ್ದರು.

 deepawali_celebration_02deepawali_celebration_03deepawali_celebration_04deepawali_celebration_05deepawali_celebration_06deepawali_celebration_07deepawali_celebration_08deepawali_celebration_09deepawali_celebration_10deepawali_celebration_11deepawali_celebration_12deepawali_celebration_13