ಜೆಪ್ಪು ಕುಡ್ಪಾಡಿ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್ ಲೋಬೊ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ಇಂದು 19.01.2018 ರಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜೆ.ಆರ್ ಲೋಬೊರವರು ಮಾತನಾಡುತ್ತಾ, ಕುಡ್ಪಾಡಿ ರಸ್ತೆಯು ನಗರದ ಅತೀ ಮುಖ್ಯವಾದ ಕೂಡು ರಸ್ತೆಯಾಗಿದ್ದು, ಈಗಾಗಲೇ ರೈಲ್ವೆ ಅಂಡರ್ ಪಾಸ್ ಕಾಮಗಾರಿಯು ಮುಕ್ತಾಯವಾಗಿದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗಲಿದ್ದು, ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಈ ರಸ್ತೆಯು ಮಹಾಕಾಳಿ ಪಡ್ಪುವಿನ ರಸ್ತೆಗೆ ಉಪಯೋಗವಾಗಲಿದ್ದು, ಈ ರಸ್ತೆಯ ಅಗಲೀಕರಣ ಕಾಮಗಾರಿ ಪೂರ್ಣಗೊಂಡರೆ ಜನರ ಬೇಡಿಕೆಗಳನ್ನು ಈಡೇರಿಸಬಹುದು. ಮಂಗಳೂರು ಮಹಾನಗರ ಪಾಲಿಕೆಯ ಪ್ರೀಮಿಯಂ ಅಫೈರ್ ನಿಧಿಯಿಂದ ಈಗಾಗಲೇ ರೂ.43 ಲಕ್ಷ ಮಂಜೂರಾಗಿದೆ. ಆದಷ್ಟು ಬೇಗನೇ ಈ ಕಾಮಗಾರಿಯನ್ನು ಪೂರ್ತಿಗೊಳಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಮಂಗಳೂರುನಲ್ಲಿರುವ ಹೆಚ್ಚಿನ ಪರ್ಯಾಯ ರಸ್ತೆಗಳಿಗೆ ಆಧ್ಯತೆ ನೀಡಲಾಗುವುದು. ಇದು ಜನರಿಗೆ ಪ್ರಯಾಣದ ಅವಧಿಯು ಬಹಳಷ್ಟು ಕಡಿಮೆಯಾಗಲಿದೆ ಎಂದರು ಈ ಸಂದರ್ಭದಲ್ಲಿ ಪಾಲಿಕೆಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಾವೂಫ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಪಾಲಿಕೆಯ ಸದಸ್ಯರುಗಳಾದ ಅಪ್ಪಿ, ಶೈಲಜಾ, ರತಿಕಲಾ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ ಕೆ ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮಿನ್, ರಮಾನಂದ ಪೂಜಾರಿ, ಮೊಹಮ್ಮದ್ ನವಾಜ್, ಕೀರ್ತಿರಾಜ್, ಹರ್ಬರ್ಟ್ ಡಿಸೋಜ ಅಶೋಕ್ ಕುಡ್ಪಾಡಿ, ಪಾಲಿಕೆಯ ಅಭಿಯಂತರ ಗಣಪತಿ, ಗುತ್ತಿಗೆದಾರ ಗುರುಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.