ಮಂಗಳೂರು: ಪದವು 21 ನೇ ವಾರ್ಡ್ ನಲ್ಲಿರುವ ಚಾಲುಕ್ಯಾ ರೆಸ್ಟೊರೇಂಟ್ ನಿಂದ ಪೊಲೀಸ್ ಕ್ವಾಟ್ರಸ್ ನವರೆಗೆ ಹಾಗೂ ಮರಿಯಗಿರಿ ಮಂಜಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು.
2015- 16 ಎಸ್.ಎಚ್.ಸಿ ಅನುದಾನದ ಅಡಿಯಲ್ಲಿ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲಾರ್ಟ್ ಪಿಂಟೊ, ಕು. ಅಪ್ಪಿ, ಮನಪ ಸದಸ್ಯರಾದ ಅಖಿಲಾ ಆಳ್ವಾ, ಪ್ರಕಾಶ್ ಅಳಪೆ, ಪ್ರಕಾಶ ಸಲ್ಯಾನ್, ರಜನೀಶ್, ಸಬಿತಾ ಮಿಸ್ಕಿತ್ ಹಾಗೂ ಡೆನ್ನಿಸ್ ಡಿಸಿಲ್ವಾ, ಸ್ಟಾನಿ ಪಿಂಟೊ, ಬ್ಯಾಪ್ಟಿಸ್, ನೆಲ್ಸನ್ ಮೊಂತೇರೊ, ಶೈಲೇಶ ಆಳ್ವ, ಶೇಖರ್ ಪೂಜಾರಿ, ರವಿ, ಯಶವಂತ್, ನೀಲಾಧರ್, ಸ್ಟೇನಿ ಪಿಂಟೊ, ಚಿತ್ರಾ. ಎನ್ ಮುಂತಾದವರು ಉಪಸ್ಥಿತರಿದ್ದರು.